ಪುತ್ತೂರು: ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿಜೀ ಯವರು ಅರುಣ್ ಕುಮಾರ್ ಪುತ್ತಿಲರ ಮನೆಯಲ್ಲಿ ಜೂ.9 ಶುಕ್ರವಾರ ವಾಸ್ತವ್ಯ ಮಾಡಿದರು.

ಅರುಣ್ ಕುಮಾರ್ ಪುತ್ತಿಲ ದಂಪತಿ ಸ್ವಾಮೀಜಿಯವರ ಪಾದ ಪೂಜೆ ಮಾಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಅರುಣ್ ಪುತ್ತಿಲರಲ್ಲಿ ಹಲವು ಮಾತುಕತೆ ನಡೆಸಿದರು. ಸ್ವಾಮೀಜಿ ಜೊತೆ ಪೇಜಾವರ ಆಪ್ತ ವರ್ಗ ಕೂಡ ಆಗಮಿಸಿತ್ತು.