ನಾಳೆ (ಜೂ. ೧೧) : ಕೆಎಸ್‌ಆರ್‌ಟಿಸಿಯಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಚಾಲನೆ

ಪುತ್ತೂರು; ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಒಂದಾಗಿರುವ ಮಹಿಳೆಯರಿಗೆ ಉಚಿತ ಸರಕರಿ ಬಸ್ ಪ್ರಯಾಣ ( ನಮ್ಮ ಪ್ರಮಾಣ ನಿಮ್ಮ ಪ್ರಯಾಣ) ಯೋಜನೆಗೆ ಜೂ. ೧೧  ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ಪುತ್ತೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದ್ದು ಆ ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

ಪುತ್ತೂರಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಹಿತಿ ನೀಡಿದ ಶಾಸಕರು, ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 5 ಉಚಿತ ಯೋಜನೆಗಳ ಭರವಸೆಯನ್ನು ನೀಡಿತ್ತು. ಈ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಣವೂ ಇತ್ತು. ಈ ಯೋಜನೆಯನ್ನು ಜೂ. ೧೧ ರಂದು ಸರಕಾರ ಆರಂಭಿಸಲಿದೆ. ಪುತ್ತೂರಿನಲ್ಲಿ ಮಧ್ಯಾಹ್ನ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಗ್ರಾಮಗ್ರಾಮಗಳಲ್ಲಿ ಐದು ಉಚಿತ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮತ್ತು ಮತದಾರರಿಗೆ ಮನವರಿಕೆ ಮಾಡುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.































 
 

ಐದು ಬಸ್ ನಗರದೆಲ್ಲೆಡೆ ಸಂಚಾರ

ಐದು ಬಸ್ಸುಗಳು ಆದಿನ ನಗರದೆಲ್ಲೆಡೆ ಸಂಚಾರವನ್ನು ನಡೆಸಲಿದೆ. ಮಹಿಳಾ ಕಾರ್ಯಕರ್ತರು ಬಸ್ಸಲ್ಲಿ ಉಚಿತವಾಗಿ ಪ್ರಯಾಣ ಮಾಡಲಿದ್ದು ಈ ಪ್ಯಕಿ ಒಂದು ಬಸ್ಸನ್ನು ಅಲಂಕಾರ ಮಾಡಲಾಗುತ್ತದೆ. ಐದು ಬಸ್ಸುಗಳು ಯೋಜನೆಯ ಪ್ರಚಾರಕ್ಕಾಇ ಬಳಸಲಾಗುತ್ತದೆ. ಪುತ್ತೂರು ನಗರ, ನೆಹರೂನಗರ, ಬನ್ನೂರುಮ ಪರ್ಲಡ್ಕ, ದರ್ಬೆ, ಬೈಪಾಸ್, ಸಾಲ್ಮರ, ಕೆಮ್ಮಾಯಿ ಹೀಗೇ ನಗರದಾದ್ಯಂತ ಸಂಚಾರ ನಡೆಸಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಣದ ಬಗ್ಗೆ ಮನವರಿಕೆ ಮಾಡುವ ಕಾರ್ಯಕ್ರಮ ಇದೇ ದಿನ ನಡೆಯಲಿದೆ.

ಮಹಿಳೆಯರಿಂದ ನೃತ್ಯ ಕಾರ್ಯಕ್ರಮ

ಉಚಿತ ಯೋಜನೆಯ ಅಂಗವಾಗಿ ಮಹಿಳೆಯರಿಂದ ನೃತ್ಯ ಕಾರ್ಯಕ್ರಮ ಇರುತ್ತದೆ. ವಿಶೇಷ ಬ್ಯಾಂಡ್, ವಾದ್ಯ ಮೇಳದವರು ಭಾಗವಹಿಸಲಿದ್ದಾರೆ. ನೃತ್ಯ ಕಾರ್ಯಕ್ರಮದ ಬಳಿಕ ಸಭಾ ಕಾರ್ಯಕ್ರಮವಿದ್ದು ಆ ಬಳಿಕ ಭೋಜನದ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಮಾಡಲಾಗಿದೆ.

6 ವರ್ಷ ಪ್ರಯದ ಹೆಣ್ಣು ಮಗುವಿನಿಂದ ಹಿಡಿದು ವಯೋವೃದ್ದರ ವರೆಗೆ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಣವಾಗಿರುತ್ತದೆ. ನಿರ್ವಾಹಕ ಟಿಕೆಟ್ ನೀಡುತ್ತಾರೆ ಆದರೆ ಹಣ ಪಾವತಿ ಇಲ್ಲ. ಪ್ರತೀಯೊಬ್ಬ ಪ್ರಯಾಣಿಕೆಗೂ ಟಿಕೆಟ್ ನೀಡಲಾಗುತ್ತದೆ. ಝೀರೋದಿಂದ 6ವರ್ಷದ ತನಕ ಯವುದೇ ಮಕ್ಕಳಿಗೂ ಬಸ್ಸಿನಲ್ಲಿ ಟಿಕೆಟ್ ಇಲ್ಲ ಎಂದು ಪುತ್ತೂರು ಕೆಎಸ್ ಆರ್ ಸಿ ಡಿಪೊ ಮೆನೆಜರ್ ಇಸ್ಮಾಯಿಲ್ ಸಭೆಗೆ ಮಾಹಿತಿ ನೀಡಿದರು.

ಕರ್ನಾಟಕಕ್ಕೆ ಸೇರಿದ ಅಂತರರಾಜ್ಯ ಬಸ್ಸುಗಳಲ್ಲಿ ಕರ್ನಾಟಕದ ಗಡಿತನಕ ಉಚಿತವಾಗಿ ಸಂಚಾರ ಮಾಡಬಹುದಾಗಿದೆ. ಬೇರೆ ರಾಜ್ಯದ ಬಸ್ಸುಗಳಲ್ಲಿ ಉಚಿತ ಪ್ರಯಾಣ ಇರುವುದಿಲ್ಲ.ಪುತ್ತೂರಿನಿಂದ ಗಾಳಿಮುಖಕ್ಕೆ ತೆರಳುವ ಸರಕಾರಿ ಬಸ್ಸುಗಳಲ್ಲಿ ಗಾಳಿಮುಖ ತನಕ ಉಚಿತವಾಗಿ ಸಂಚಾರ ಮಾಡಬಹುದಾಗಿದೆ. ಗಾಳಿಮುಖಕ್ಕೆ ಸಂಚಾರ ಮಾಡುವಾಗ ರಸ್ತೆ ಮಧ್ಯೆ ಕೇರಳ ರಸ್ತೆ ಸಿಕ್ಕಿದರೂ ಆ ಬಳಿಕ ಕರ್ನಾಟಕ ಸೇರುವ ಕಾರಣ ಅಲ್ಲಿಗೆ ತೆರಳುವ ಬಸ್ಸುಗಳಲ್ಲಿ ಪ್ರಯಣ ಉಚಿತವಾಗಿದೆ. ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತ ಪ್ರಯಾಣ ಅನ್ವಯವಾಗುತ್ತದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಬಿ.ವಿಶ್ವನಾಥ ರೈ, ಡಾ.ರಾಜಾರಾಮ ಕೆ.ಬಿ., ಕಾವು ಹೇಮನಾಥ ಶೆಟ್ಟಿ, ಜೋಕಿಂ ಡಿಸೋ’ಜಾ, ಪ್ರಸಾದ್ ಕೌಶಲ್ ಶೆಟ್ಟಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top