ಕೊಲಂಬಿಯ: 40 ದಿನಗಳ ಹಿಂದೆ ವಿಮಾನ ಪತನಗೊಂಡು ನಾಪತ್ತೆಯಾಗಿದ್ದ ನಾಲ್ಕು ಮಕ್ಕಳನ್ನು ಪತ್ತೆಹಚ್ಚುವಲ್ಲಿ ಕೊಲಂಬಿಯದ ಸೈನಿಕರು ಯಶಸ್ವಿಯಾಗಿದ್ದಾರೆ.
ಮೇ 1 ರಂದು ಅಮೆಜಾನ್ ಕಾಡಿನ ಮಧ್ಯದಲ್ಲಿ ಸಿಸ್ನಾ ಸಿಂಗಲ್ ಇಂಜಿನ್ ಪ್ರೊಪೆಲ್ಲರ್ ಪ್ಲೇನ್ ಖಾಸಗಿ ವಿಮಾನವೊಂದು ಪತನಗೊಂಡಿತ್ತು. ವಿಮಾನದಲ್ಲಿದ್ದ ಮೂವರು ಹಿರಿಯ ಮೃತದೇಹ ೆರಡು ವಾರಗಳ ಬಳಿಕ ಘಟನೆ ನಡೆದ ಸುತ್ತಮುತ್ತ ಪತ್ತೆಯಾಗಿತ್ತು. ಆದರೆ 13, 9 4 ಹಾಗೂ 11 ವರ್ಷದ ಮಕ್ಕಳು ಸಿಕ್ಕಿರಲಿಲ್ಲ. ಮಕ್ಕಳು ಬದುಕಿದ್ದಾರೆ ಎಂದು ತೀರ್ಮಾನಿಸಿ ಪತ್ತೆ ಕಾರ್ಯ ಆರಂಭಿಸಿತ್ತು. ಇದಕ್ಕಾಗಿ 150 ಸೈನಿಕರನ್ನು, ಶ್ವಾನಪಡೆಯನ್ನು ರಚಿಸಲಾಗಿತ್ತು.
ಅವ್ಯಾಹತವಾಗಿ ಮಳೆ ಸುರಿಯುವ ಜತೆಗೆ ಕ್ರೂರ ಮೃಗಗಳಿರುವ ಕಾಡಿನಲ್ಲಿ ಮಕ್ಕಳು ಹೇಗೆ ಬದುಕಿ ಉಳಿದರು ಎಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಮಕ್ಕಳು ಇಷ್ಟು ದಿನ ಬದುಕಿ ಉಳಿದದ್ದು ಹೇಗೆ ಎಂಬುದು ಇಡೀ ಜಗತ್ತಿನ ಕುತೂಹಲ ಕೆರಳಿಸಿತ್ತು.
ಇತಿಹಾಸದಲ್ಲಿ ಚಿರಕಾಲ ಉಳಿಯುವ ಘಟನೆ ಮತ್ತು ಪ್ರತಿಕೂಲ ಹವಮಾನದಲ್ಲೂ ಮನುಷ್ಯ ಬದುಕುಳಿದ ಅಪರೂಪದ ವಿದ್ಯಮಾನ ಎಂದು ಬಣ್ಣಿಸಲಾಗಿದೆ.
ಮಕ್ಕಳು ಬದುಕಿದ್ದು, ಸಿಕ್ಕಿದ್ದಾರೆ ಎಂದು ಇದೀಗ ಸೇನೆ ಸ್ವೀಟ್ ಮಾಡಿ ತಿಳಿಸಿದಾಗ ಕೊಲಂಬಿಯದಲ್ಲಿ ಸಂಭ್ರಮದ ವಾತಾವರಣ ಮೂಡಿದೆ.