ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆಗಳ ವತಿಯಿಂದ ನೀಡಿದ 6 ಡಯಾಲಿಸಿಸ್  ಮೆಷಿನ್, ಆರ್.ಒ ಪ್ಲಾಂಟ್ ಲೋಕಾರ್ಪಣೆ

ಪುತ್ತೂರು: ರೋಟರಿ ಕ್ಲಬ್ ಸಂಸ್ಥೆಗಳಿಂದ ಡಯಾಲಿಸಿಸ್ ಮೆಷಿನ್ ನೀಡುವ ಮೂಲಕ ಒಳ್ಳೆಯ ಯೋಜನೆಯೊಂದು ಸಮಾಜಕ್ಕೆ ಅರ್ಪಣೆ ಮಾಡುವ ಕೆಲಸ ನಡೆದಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಶುಕ್ರವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಟರಿ ಜಿಲ್ಲೆ 3181ರ ರೋಟರಿ ಕ್ಲಬ್‌ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಇಲೈಟ್, ಅಮೆರಿಕಾ ಫ್ಲೋರಿಡಾ ರೋಟರಿ ಜಿಲ್ಲೆ 5890 ರೋಟರಿ ಕ್ಲಬ್ ನ್ಯೂ ಟಾಂಪಾ ನೂನ್ ವತಿಯಿಂದ ರೋಟರಿ ಡಯಾಲಿಸಿಸ್ ಸೆಂಟರ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಬಡವರ ಸೇವೆ ದೇವರ ಸೇವೆ ಎಂಬುದನ್ನು ಎಲ್ಲರೂ ಮನಸ್ಸಿನಲ್ಲಿಟ್ಟು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ನೀಡುವಲ್ಲಿ ಸಹಕರಿಸಿ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದನೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿದೆ ಎಂದ ಅವರು, ಸರಕಾರಿ ಆಸ್ಪತ್ರೆಯ ಪ್ರಮುಖ ಬೇಡಿಕೆ ಅನಸ್ತೇಶಿಯನ್, ಗೈನಕಾಲಜಿಸ್ಟ್ ಹಾಗೂ ಟೆಕ್ನಿಷಿಯನ್ ಅವಶ್ಯಕತೆಯಿದ್ದು ಇದನ್ನು ಒದಗಿಸುವ ಭರವಸೆ ನೀಡಿದರು.



































 
 

ಈಗಾಗಲೇ ಆಯುಷ್ಮಾನ್ ಹಾಗೂ ಯಶಸ್ವಿನಿ ಯೋಜನೆಯಿಂದ ಬಹುತೇಕ ಆಸ್ಪತ್ರೆಗಳು ಹೊರ ಬಂದಿದ್ದು, ಇದರ ಪ್ರಯೋಜನ ಸಿಗದಂತಾಗಿದೆ. ಈ ನಿಟ್ಟಿನಲ್ಲಿ ಈ ಹಿಂದೆ ಇದ್ದ ಎಲ್ಲಾ ಆಸ್ಪತ್ರೆಗಳಲ್ಲಿ ಪುನಃ ಯೋಜನೆ ಅಳವಡಿಸಿಕೊಳ್ಳುವಂತೆ ಕಡ್ಡಾಯ ಮಾಡುವ ಇರಾದೆ ಇದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಮನವಿ ಮಾಡಲಿದ್ದೇನೆ ಎಂದರು.

ರೋಟರಿ ಜಿಲ್ಲೆ 3181 ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್, ಮಾಜಿ ಶಾಸಕ ಸಂಜೀವ ಮಠಂದೂರು ಶುಭ ಹಾರೈಸಿದರು.

ರೋಟರಿ ಅಧ್ಯಕ್ಷ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಪಿಡಿಜಿ ಕೆ. ಕೃಷ್ಣ ಶೆಟ್ಟಿ, ಸೂರ್ಯನಾರಾಯಣ ಕೆ., ಮಾಜಿ ಶಾಸಕ ಸಂಜೀವ ಮಠಂದೂರು, ವಿಕ್ರಮದತ್ತ, ಪಿ.ಕೆ. ರಾಮಕೃಷ್ಣ, ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಆಶಾಜ್ಯೋತಿ ಕೆ., ನಾರಾಯಣ ಹೆಗ್ಡೆ, ಕೆ. ವಿಶ್ವಾಸ್ ಶೆಣೈ, ರಾಜೇಂದ್ರ ಕಲ್ಬಾವಿ, ಎ.ಜೆ. ರೈ, ಶಿವರಾಮ ಏನೆಕಲ್ಲು, ಹರ್ಷಕುಮಾರ್ ರೈ, ಸೆನೋರೀಟಾ ಮತ್ತಿತರರು ಉಪಸ್ಥಿತರಿದ್ದರು.

ಚೈತ್ರಿಕಾ ಪ್ರಾರ್ಥಿಸಿದರು. ರೋಟರಿ ಕ್ಲಬ್‌ ಪುತ್ತೂರು ಯುವ ಅಧ್ಯಕ್ಷೆ ರಾಜೇಶ್ವರಿ ಕೆ. ಆಚಾರ್ ಸ್ವಾಗತಿಸಿದರು. ರತ್ನಾಕರ ರೈ ಪ್ರಸ್ತಾವನೆಗೈದರು. ಸಿಲ್ವಿಯ ಡಿ ಸೋಜ ವಂದಿಸಿದರು. ಅನಿಲ ದೀಪಕ್ ಶೆಟ್ಟಿ, ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top