ಇಂದು ಜಮ್ಮುವಿನಲ್ಲಿ ತಿರುಪತಿ ಬಾಲಾಜಿ ದೇವಸ್ಥಾನದ ಲೋಕಾರ್ಪಣೆ | ಜಮ್ಮುವಿನ ಅತೀ ದೊಡ್ಡ ದೇವಾಲಯಗಳಲ್ಲಿ ಒಂದಾಗಿರುವ ದೇವಾಲಯ

ಜಮ್ಮು: ಜಮ್ಮು ಮತ್ತು ಕಾಶ್ಮೀರ್ ಮಜೀನ್‍ನ ಶಿವಾಲಿಕ್ ಕಾಡುಗಳ ಮಧ್ಯೆ ಇರುವ ಸುಂದರವಾದ ತಿರುಪತಿ ಬಾಲಾಜಿ ದೇವಾಲಯ ಇಂದು ಉದ್ಘಾಟನೆಗೊಳ್ಳಲಿದೆ.

ಜೂ.8 ರಂದು ಭಕ್ತಾದಿಗಳಿಗೆ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶ್ರೀ ವೆಂಕಟೇಶ್ವರ ದೇವಾ;ಲಯವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಸುಮಾರು 62 ಎಕ್ರೆ ಜಾಗದಲ್ಲಿ ನಿರ್ಮಿಸಲಾದ ಈ ದೇವಸ್ಥಾನ ಜಮ್ಮು ಪ್ರದೇಶದ ಅತೀ ದೊಡ್ಡ ದೇವಾಲಯಗಳಲ್ಲಿ ಒಂದಾಗಲಿದೆ. ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ತಿರುಪತಿ ಬಾಲಾಜಿ ದೇವಾಲಯ ಆಂಧ್ರಪ್ರದೇಶದ ಹೊರವಲಯದಲ್ಲಿ ನಿರ್ಮಿಸಲಾದ ಆರನೇ ದೇವಾಲಯವಾಗಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top