ಪುತ್ತೂರು: ಸಾಧನೆಗೆ ಅತೀ ಮುಖ್ಯವಾದದ್ದು ಸ್ಪಷ್ಟ ಗುರಿ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಮೊದಲು ನಾವು ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಅದರ ಮೇಲೆ ನಮ್ಮ ಜೀವನದ ಗೆಲುವು ಅವಲಂಬಿತವಾಗಿರುತ್ತದೆ. ನಮ್ಮ ಜೀವನದಲ್ಲಿ ಧನಾತ್ಮಕವಾಗಿ ಚಿಂತಿಸುವುದನ್ನು ರೂಢಿಸಿಕೊಳ್ಳುವುದು ಅತ್ಯವಶ್ಯಕ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ನಾವು ವೃತ್ತಿಯ ಬಗೆಗೆ ಯೋಚಿಸಬೇಕು ಎಂದು ಎನ್.ಎ.ಎಂ. ಎಫ್.ಐ ನೊಂದಾಯಿತ ಮ್ಯೂಚುವಲ್ ಫಂಡ್ ವಿತರಕ ವಿನೋದ್ ಕುಮಾರ್ ಹೇಳಿದರು.

ವಿವೇಕಾನಂದ ಕಾಲೇಜಿನ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ )ದ ವಾಣಿಜ್ಯ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ ಆರೋಹಣ -2023 ಫೆಸ್ಟ್ ನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಕಲಿಕಾ ಸಮಯದಲ್ಲಿ ಇಂಟರ್ನ್ ಶಿಪ್ , ಪ್ರಮಾಣ ಪತ್ರ ಕೋರ್ಸ್ ಗಳು ಮುಂತಾದವುಗಳಲ್ಲಿ ಪರಿಣಿತಿಯನ್ನು ಪಡೆದರೆ ಮುಂದಿನ ವೃತ್ತಿ ಜೀವನದಲ್ಲಿ ಉಜ್ವಲವಾದ ಯಶಸ್ಸನ್ನು ಕಾಣಬಹುದು. ಎಂದು.
ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ.ಗಣಪತಿ ಭಟ್ ಮಾತನಾಡಿ, ನಮ್ಮ ಕಲಿಕಾ ಸಮಯವನ್ನು ವ್ಯರ್ಥ ಮಾಡಬಾರದು. ವಿದ್ಯಾರ್ಥಿ ಜೀವನದಲ್ಲಿ ಏನನ್ನಾದರೂ ಸಾಧಿಸಿ ಯಶಸ್ಸು ಕಂಡಾಗ ಮಾತ್ರ ವಿದ್ಯಾರ್ಥಿ ಜೀವನಕ್ಕೆ ಸಾರ್ಥಕತೆ ದೊರೆಯುವುದು ಎಂದರು.
ಸಮಾರೋಪ ಸಮಾರಂಭ :
ಸಮಾರೋಪ ಸಮಾರಂಭದಲ್ಲಿ ಯೂಟ್ಯೂಬರ್ ಶರಣ್ ಚಿಲಿಂಬಿ ಮಾತನಾಡಿ, ಜೀವನದಲ್ಲಿ ನಮಗೆ ಸಾಕಷ್ಟು ಅವಕಾಶಗಳು ಸಿಗುತ್ತಿರುತ್ತವೆ. ಬೇರೆ ಬೇರೆ ರೀತಿಯ ಸ್ಪರ್ಧೆಗಳು ನಮ್ಮ ಜೀವನದಲ್ಲಿ ಬರುತ್ತವೆ. ನಾವು ಯಾಕೆ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಯೋಚಿಸುವುದಾದರೆ ಮುಂದೆ ಜೀವನ ಎನ್ನುವ ಪರೀಕ್ಷೆಯನ್ನು ಗೆಲ್ಲಲು ಇಂತಹ ಸ್ಪರ್ಧೆಗಳು ಕಾರಣವಾಗುತ್ತದೆ ಎಂದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್, ಬಂಟ್ವಾಳ ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪಿಯು ಕಾಲೇಜ್ ಉಪನ್ಯಾಸಕ ಸುಶೀತ್, ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ. ಶಿವಪ್ರಸಾದ್ ಕೆ. ಎಸ್, ಆಡಳಿತ ಮಂಡಳಿಯ ವಿಶೇಷ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ, ವಿದ್ಯಾರ್ಥಿ ಆನಂದ್ ಜಿ.ಪ್ರಭು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸ್ವಸ್ತಿ, ದೀಪ್ತಿ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ವಲ್ ಶೆಣೈ ಸ್ವಾಗತಿಸಿ, ಅಶ್ವಿನಿ, ಅನುಜ್ಞಾ ಪ್ರಾರ್ಥಿಸಿದರು. ಜ್ಯೋತಿಕ ವಂದಿಸಿದರು.