ಪುತ್ತೂರು: ಹಕ್ಕುಪತ್ರ ಪಡೆದುಕೊಂಡಿರುವ ಎಲ್ಲರಿಗೂ ಮನೆ ನಿವೇಶನ ನೀಡುವಂತೆ ಶಾಸಕರಾದ ಅಶೋಕ್ ರೈ ಅಧಿಕಾರಿಗೆ ಸೂಚನೆಯನ್ನು ನೀಡಿದ್ದಾರೆ..
ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಅಧಿಕಾರಿಗಳ ಸಭೆಯನ್ನು ಶಾಸಕರು ಈ ಆದೇಶವನ್ನು ಹೊರಡಿಸಿದ್ದಾರೆ, ಈ ಮೂಲಕ ಕಳೆದ 7 ವರ್ಷಗಳಿಂದ ಇತ್ಯರ್ಥವಾಗದೆ ಇದ್ದ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದಾರೆ.
ಕೋಡಿಂಬಡಿ ಗ್ರಾಮದ ಅರ್ಬಿ-ಕೂರ್ನಡ್ಕದಲ್ಲಿ ಕೋಡಿಂಬಡಿ ಗ್ರಾಪಂ ಗ್ರಾಮದ ಮನೆ ರಹಿತರಿಗೆ ನಿವೇಶನವನ್ನು ಕಾಯ್ದಿರಿಸಿತ್ತು. 2014-15 ನೇ ಸಾಲಿನಲ್ಲಿ ಕೋಡಿಂಬಾಡಿ ಗ್ರಾಮಪಂಚಾಯತ್ ಅರ್ಬಿಯಲ್ಲಿದ್ದ 1.34 ಎಕ್ರೆ ಸ್ಥಳದಲ್ಲಿ 29 ಮಂದಿ ಫಲಾನುಭವಿಗಳಿಗೆ ನಿವೇಶನವನ್ನು ಗುರುತಿಸಿ ಅವರಿಗೆ ಹಕ್ಕುಪತ್ರವನ್ನು ನೀಡಿತ್ತು. ಆದರೆ ನಿವೇಶನ ಪಡೆದುಕೊಂಡಿದ್ದ ಫಲಾನುಭವಿಗಳು ಮನೆ ಕಟ್ಟುವಲ್ಲಿ ಸಮಸ್ಯೆ ಉಂಟಾಗಿತ್ತು. ನಿವೇಶನಕ್ಕಾಗಿ ಕಾಯ್ದಿರಿಸಿದ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂಬ ತಕರಾರು ಇದ್ದ ಕಾರಣ ಏಳು ವರ್ಷಗಳಿಂದ ಆ ಜಾಗದಲ್ಲಿ ಮನೆ ನಿರ್ಮಾಣಮಾಡಲು ಫಲಾನುಭವಿಗಳಿಗೆ ಕಾನೂನಿನ ತೊಡಕಾಗಿತ್ತು. ಕೋಡಿಂಬಡಿ ಗ್ರಾಪಂ ಈ ವಿಚಾರದಲ್ಲಿ ನಿರ್ಣಯಮಾಡಿದ್ದರೂ ಮನೆ ನಿರ್ಮಾಣ ಮಾಡಲು ಸಾಧ್ಯವೇ ಆಗಿರಲಿಲ್ಲ. ಇದೀಗ ಶಾಸಕ ಅಶೋಕ್ ಕುಮಾರ್ ರೈ ಸಮಸ್ಯೆ ಇತ್ಯರ್ಥಪಡಿಸಿದ್ದಾರೆ