ನಮ್ಮನ್ನು ನಾವು ಕಾಪಾಡಿಕೊಳ್ಳಲು ಪ್ರಕೃತಿಯ ಸಂರಕ್ಷಣೆ ಅನಿವಾರ್ಯ: ದಿನೇಶ್ ನಾಗೇಗೌಡ | ವಿವೇಕ ಸಂಜೀವಿನಿ’ ತರಬೇತಿ ಶಿಬಿರ ಉದ್ಘಾಟನೆ

ಪುತ್ತೂರು: ಪ್ರಸ್ತುತ ಕಾಲಘಟ್ಟದಲ್ಲಿ ಪ್ಲಾಸ್ಟಿಕ್ ಹೊರತು ಬದುಕೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪ್ಲಾಸ್ಟಿಕ್ ಸಂಸ್ಕರಣೆ ಸಂಪೂರ್ಣವಾಗಿ ಆಗದಿದ್ದರೂ ತಕ್ಕ ಮಟ್ಟಿಗೆ ಮಾಡಲು ಸಾಧ್ಯ. ಈ ನೆಲೆಯಲ್ಲಿ ಸರಕಾರ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಸೂಕ್ತ ಯೋಜನೆ ರೂಪಿಸಬೇಕಾದ ಅಗತ್ಯವಿದೆ ಎಂದು ಹಿರಿಯ ವಿಜ್ಞಾನಿ ಮತ್ತು ಬೆಂಗಳೂರಿನ ಸೆಂಟ್ರಲ್ ಇನ್ಸ್‌ಟ್ಯೂಟ್ ಆಫ್ ಮೆಡಿಸಿನಲ್ ಆಂಡ್ ರೋಮೆಟಿಕ್ ಪ್ಲಾಂಟ್ಸ್ ಮುಖ್ಯಸ್ಥ ಡಾ. ದಿನೇಶ್ ನಾಗೇಗೌಡ ಹೇಳಿದರು.

ಅವರು ಸೋಮವಾರ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಔ?ಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜನ ಜಾಗೃತಿಯ ಆಂದೋಲನ ’ವಿವೇಕ ಸಂಜೀವಿನಿ’ ತರಬೇತುದಾರರ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಮ್ಮನ್ನು ನಾವು ಕಾಪಾಡಿಕೊಳ್ಳುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಪರಿಸರ ರಕ್ಷಣೆ ಮಾನವನಿಗೆ ಅನಿವಾರ್ಯವಾಗಿದ್ದು, ಮನು? ಪ್ರಕೃತಿಯ ಪ್ರತಿಯೊಂದು ಸೃಷ್ಠಿಯ ಮೇಲೂ ಅವಲಂಬಿತನಾಗಿದ್ದಾನೆ. ರೈತರು ಆರ್ಥಿಕ ಲಾಭದ ಹೊರತು ಯಾವ ಬೆಳೆಯನ್ನೂ ಬೆಳೆಯುವುದಿಲ್ಲ. ಆದರೆ ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಸಣ್ಣ ಮಟ್ಟದಲ್ಲಾದರೂ ಕೈ ಜೋಡಿಸಬೇಕು ಎಂದರು.



































 
 

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸುತ್ತ ಮುತ್ತಲಿನ ಪರಿಸರ ಸದಾ ನಮ್ಮ ಮನ ತಣಿಸುತ್ತದೆ. ಇಲ್ಲಿನ ಪ್ರತಿಯೊಂದು ಅಂಶವೂ ಆರೋಗ್ಯಕರ ಜೀವನಕ್ಕೆ ಸಹಕಾರಿ. ಪಂಚಭೂತಗಳನ್ನು ಒಳಗೊಂಡ ಈ ಸೃಷ್ಠಿಯ ಮೇಲೆ ಮನು? ಪ್ರತೀ ಹಂತದಲ್ಲೂ ಅವಲಂಬಿತ. ಆದರೆ ಈ ಅವಲಂಭನೆ ಅತಿಯಾಗಿ ಪ್ರಕೃತಿಯ ವಿನಾಶದತ್ತ ತೊಡಗಿದ್ದಾನೆ. ನೈಸರ್ಗಕವಾಗಿ ಸಿಕ್ಕ ಸಂಪನ್ಮೂಲಗಳಿಗೆ ಅತಿಯಾದ ಅವೈಜ್ಞಾನಿಕ ಉಪಯೋಗದಿಂದಾಗುವ ಮುಂದಿನ ಅಪಾಯಗಳ ಬಗ್ಗೆ ಭಯ ಮೂಡಿಸುತ್ತದೆ. ಈ ನಿಟ್ಟಿನಲ್ಲಿ ?ವಿವೇಕ ಸಂಜೀವಿನಿ’ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಪರಿಸರದ ರಕ್ಷಣೆಗೆ ಬಹುದೊಡ್ಡ ಕೊಡುಗೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಉರಗ ತಜ್ಞ ಡಾ. ರವೀಂದ್ರನಾಥ ಐತಾಳ್, ಖ್ಯಾತ ಔ?ಧೀಯ ಸಸ್ಯಗಳ ಸಂರಕ್ಷಕ ದಿನೇಶ್ ನಾಯಕ್ ಅವರಿಗೆ ವಿವೇಕ ಸಂಜೀವಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಔ?ಧೀಯ ಸಸ್ಯಗಳ ವಿವರಗಳನ್ನು ಒಳಗೊಂಡ ’ವಿವೇಕ ಸಂಜೀವಿನಿ’ ಪುಸ್ತಕ ಬಿಡುಗಡೆ ಹಾಗೂ ರೇಡಿಯೋ ಪಾಂಚಜನ್ಯದ ಔ?ಧೀಯ ಸಸ್ಯಗಳ ಬಗೆಗಿನ ಮಾಹಿತಿಯ ಸರಣಿ ಬಾನುಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

ಈ ಸಂದರ್ಭದಲ್ಲಿ ಔ?ಧೀಯ ಸಸ್ಯ ತಜ್ಞ ದಿನೇಶ್ ನಾಯಕ್ ’ಪಶ್ಚಿಮ ಘಟ್ಟದ ಜೀವ ವೈವಿಧ್ಯತೆ, ಅಳಿವಿನಂಚಿನಲ್ಲಿರುವ ಔ?ಧೀಯ ಸಸ್ಯಗಳ ಬಗ್ಗೆ ಒಂದು ಅವಲೋಕನ ’ ಎಂಬ ವಿ?ಯದ ಬಗ್ಗೆ, ಔ?ಧೀಯ ಸಸ್ಯಗಳ ಸಂರಕ್ಷಣೆ ಮತ್ತು ಕೃಷಿ ವಿಧಾನಗಳು-ಪ್ರಾಯೋಗಿಕ ಒಳನೋಟಗಳು ಎಂಬ ವಿ?ಯದ ಬಗ್ಗೆ ವಸಂತ ಕಜೆ ಮತ್ತು ಡಾ.ಜೆಡ್ಡು ಗಣಪತಿ ಭಟ್ ಸಾಮಾನ್ಯ ಖಾಯಿಲೆಗಳನ್ನು ನಿಯಂತ್ರಿಸುವಲ್ಲಿ ಔ?ಧೀಯ ಸಸ್ಯ ಎಂಬ ವಿ?ಯದ ಬಗ್ಗೆ ವಿ?ಯ ಮಂಡಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯಚರಿಸುತ್ತಿರುವ ಸುಮಾರು ೮೦ಕ್ಕೂ ಅಧಿಕ ವಿದ್ಯಾಸಂಸ್ಥೆಗಳ ಆಯ್ದ ಉಪನ್ಯಾಸಕರು ಶಿಬಿರದಲ್ಲಿ ತರಬೇತಿ ಪಡೆದುಕೊಂಡರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃ? ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಸಿಂಚನಲಕ್ಷ್ಮಿ ಪ್ರಾರ್ಥಿಸಿ, ಶ್ವೇತಾ ವೈಯುಕ್ತಿಕ ಗೀತೆ ಹಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ರೂಪಲೇಖಾ ಸ್ವಾಗತಿಸಿ, ಡಾ. ಸುಧಾ ರಾವ್ ವಂದಿಸಿದರು. ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರೋನಿಕ್ ವಿಭಾಗದ ಲ್ಯಾಬ್ ಸಹಾಯಕ ಹರಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top