ಪುತ್ತೂರು: ಪುತ್ತೂರು ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಪರ್ಪುಂಜ ಸಮೃದ್ಧಿ ಜ್ಞಾನ ವಿಕಾಸ ಕೇಂದ್ರದ ಜಂಟಿ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ಪರ್ಪುಂಜ ಶಾಲೆಯಲ್ಲಿ ಆಚರಿಸಲಾಯಿತು.
ಒಳಮೊಗ್ರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುಂಬ್ರ ಜನಜಾಗೃತಿ ವೇದಿಕ ವಲಯ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ದೀಪ ಬೆಳಗಿಸಿ ಉದ್ಘಾಟಿಸಿದರು, ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ದಿವಾಕರ ಪೂಜಾರಿ ಪಾಲ್ಗೊಂಡು, ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು,ತಾಯಂದಿರು ಮಕ್ಕಳ ಬಗ್ಗೆ ನಿಗಾ ವಹಿಸುವ ಕುರಿತು, ತಂಬಾಕು ಸೇವನೆಯಿಂದ ಬರುವ ಖಾಯಿಲೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಮಹಿಳೆಯರು ಮುಂದಾಗಬೇಕು ಎಂದರು..
ವಲಯ ಒಕ್ಕೂಟದ ಅಧ್ಯಕ್ಷ ಕುಂಬ್ರ ಎಸ್ ಮಾಧವ ರೈ ದುಶ್ಚಟದಿಂದ ಸಮಾಜದಲ್ಲಾಗುವ ಅನಾಹುತಗಳ ಬಗ್ಗೆ ಮಾತನಾಡಿದರು ವೇದಿಕೆಯಲ್ಲಿ ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಬದ್ರುನ್ನಿಸ ಪರ್ಪುಂಜ, ಒಳಮೊಗ್ರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸವಿತಾ ಎಸ್ ಶೇಕಮಲೆ, ಬೆಳಕು ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ರಾಜೀವಿ ಕುಂಬ್ರ ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು .
ವಲಯ ಮೇಲ್ವಿಚಾರಕಿ ಮೋಹಿನಿ ಎಸ್ ಗೌಡ ಕಾರ್ಯಕ್ರಮ ನಿರೂಪಿಸಿದರು ಸೇವಾ ಪ್ರತಿನಿಧಿ ಶಶಿಕಲಾ ರೈ ಸ್ವಾಗತಿಸಿ, ಜ್ನಾನವಿಕಾಸ ಸಂಯೋಜಕಿ ತುಳಸಿ ವಂದಿಸಿದರು