ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ವತಿಯಿಂದ ಪುತ್ತೂರು ತಾಲೂಕಿನ ನೂತನ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಕುಮಾರ್ ರೈ ಅವರನ್ನು ಭೇಟಿ ಮಾಡಲಾಯಿತು.
ಭೇಟಿ ಮಾಡಿದ ಸಂದರ್ಭ ಯೋಜನೆ ಮತ್ತು ವೇದಿಕೆ ವತಿಯಿಂದ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜನಜಾಗೃತಿ ಜಿಲ್ಲಾಧ್ಯಕ್ಷರು ಪದ್ಮನಾಭ ಶೆಟ್ಟಿ, ತಾಲೂಕು ಅಧ್ಯಕ್ಷರು ಲೋಕೇಶ್ ಹೆಗ್ಡೆ, ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರು ದುಗ್ಗೆ ಗೌಡ , ಜಿಲ್ಲಾ ನಿರ್ದೇಶಕರು ಪ್ರವೀಣ್ ಕುಮಾರ್, ವೇದಿಕೆಯ ಮಾಜಿ ತಾಲೂಕ ಅಧ್ಯಕ್ಷರು ಮಹಾಬಲ ರೈ, ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ ಉಪಸ್ಥಿತರಿದ್ದರು.