ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಆರಂಭಿಕ ಕಾರ್ಯಕ್ರಮವಾಗಿ ಶಿಕ್ಷಕರಿಗೆ ‘ಸನ್ಮತಿ’ ಕಲಿಕಾ ಕಾರ್ಯಾಗಾರ ನಡೆಯಿತು.
ಮೂರು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಬೆಂಗಳೂರು ‘ಸಂವಿತ್’ಸAಶೋಧನಾ ಕೇಂದ್ರದ ಯೋಗ ವಿಭಾಗದ ಮುಖ್ಯಸ್ಥ ಡಾ.ಸಿಂಧೂ ಮಾತನಾಡಿ, ಯೋಗ ಹಾಗೂ ಮೌಲ್ಯಶಿಕ್ಷಣವು ಪಠ್ಯ ವಿಷಯಗಳಲ್ಲಿ ಬೆಸೆದುಕೊಂಡಿದ್ದು ಇದನ್ನು ಗುರುತಿಸಿ ಮಕ್ಕಳಿಗೆ ಹೇಳಲು ಪ್ರತ್ಯೇಕ ಶಿಕ್ಷಕರ ಅಗತ್ಯವಿರುವುದಿಲ್ಲ. ಪ್ರತಿಯೊಬ್ಬ ಶಿಕ್ಷಕರು ಇದನ್ನು ಗುರುತಿಸಿ ತಮ್ಮಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಜಿಲ್ಲಾ ಸಂಯೋಜಕರಾದ ಚಂದ್ರಶೇಖರ ಹಾಗೂ ಸಂಜಯ್ ಕಥಾ ಯೋಗ, ಗಾನ – ಯೋಗ , ನೃತ್ಯ-ಯೋಗ ಗಳಂತಹ ಸರಳ ಆಯಾಮ ಆಧಾರಿತ ವಿಷಯಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿಕೊಟ್ಟರು.