ವಿದ್ಯಾರ್ಥಿ ದಿಶೆಯಿಂದಲೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು : ವಸಂತ ಕೋನಡ್ಕ | ಸಾಧನಾಭಿವಂದನಾ – ಅಭಿನಂದನಾ ಕಾರ್ಯಕ್ರಮ

ಪುತ್ತೂರು: ‘ನಮ್ಮಲ್ಲಿ ನಾವು ಪ್ರಮುಖವಾಗಿ ಐದು ಗುಣಗಳಾದ ಯೋಚನಾ ಸಾಮರ್ಥ್ಯ, ಯೋಜನಾ ಬದ್ಧತೆ, ಸಾಮಾನ್ಯಜ್ಞಾನ, ಸಮಯ ಪ್ರಜ್ಞೆ, ಸಮಾಜಮುಖಿ ಬದುಕು ಇವುಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕಾಗಿದೆ ಎಂದು ಬೆಂಗಳೂರಿನ ವಕೀಲ ವಸಂತ ಕೋನಡ್ಕ ಹೇಳಿದರು.

ವಿವೇಕಾನAದ ಕನ್ನಡ ಮಾಧ್ಯಮ ಶಾಲೆಯಲ್ಲಿ 2022-23ನೇ ಸಾಲಿನ ಹತ್ತನೇ ತರಗತಿ ಮಕ್ಕಳ ಉತ್ತಮ ಫಲಿತಾಂಶಕ್ಕಾಗಿ ಆಯೋಜಿಸಲಾದ ಸಾಧನಾಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನೊರ್ವ ಅತಿಥಿಯಾಗಿ ಪುತ್ತೂರು ಪಿ.ಎಸ್ ಪ್ರೊಜೆಕ್ಟ್ ಮಾಲಕ ಪ್ರತಾಪಸಿಂಹ ವರ್ವ ವಿದ್ಯಾರ್ಥಿಗಳಿಗೆ ನೀಡಿದ ಅಭಿನಂದನಾ ಪತ್ರ, ಸಸ್ಯದ ಕೊಡುಗೆ ಮಾಡಿದ ಹೋಮದ ಅಗ್ನಿಯ ಸಾಕ್ಷಿ ಈ ಎಲ್ಲವನ್ನೂ ಅರ್ಥೆÊಸಿಕೊಂಡಾಗ  ಹೆಚ್ಚಿದ ಜವಾಬ್ದಾರಿಯ ಅರ್ಥವಾಗುತ್ತದೆ. ‘ಸತ್ಯಂ ವದ ಧರ್ಮಂ ಚರ’ ಎಂಬುದನ್ನು ನೆನಪಿಸುತ್ತದೆ. ‘ಐಕ್ಯೂ’ ಜೊತೆಗೆ ಇಕ್ಯೂ(ಭಾವನಾತ್ಮಕ ಕೋಶಂಟ್) ಕೂಡ ಅತಿ ಮುಖ್ಯ. ಮಕ್ಕಳ ದಾರಿತಪ್ಪಿಸುವ ವ್ಯಕ್ತಿಗಳ ಪರಿಸರಗಳ ಬಗ್ಗೆ ಮಕ್ಕಳನ್ನು ಎಚ್ಚರಿಸುವ ಕಾರ್ಯವನ್ನು ತಾಯಂದಿರು, ಹಿರಿಯರು ಮಾಡುತ್ತಾ ಅವರನ್ನು ದೇಶಾಭಿಮುಖಿ, ಸಮಾಜಾಭಿಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.  ವಿವೇಕಾನಂದ ವಿದ್ಯವರ್ಧಕ ಸಂಘದ ನಿರ್ದೇಶಕರಾದ ವಸಂತ ಮಾಧವ ಅಧ್ಯಕ್ಷತೆ ವಹಿಸಿದ್ದರು. ಹೇಳಿದರು. ಶಾಲಾ ಸಂಚಾಲಕ ವಸಂತ ಸುವರ್ಣ ಸ್ವಾಗತಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು. ಶ್ವೇತಾ ಮಾತಾಜಿ ಪ್ರಾರ್ಥಿಸಿ, ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಕುಂಬ್ಲೆ ವಂದಿಸಿದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top