ಕಾಂಗ್ರೇಸ್ ಮುಖಂಡ ಜಿ.ಕೃಷ್ಣಪ್ಪ ರಿಂದ ಕಡಬ ಮಿನಿವಿಧಾನ ಸೌಧ ಪರಿಶೀಲನೆ | ಪರಾಜಿತ ಅಭ್ಯರ್ಥಿಯಿಂದ ಭರಪೂರ ಭರವಸೆ

ಕಡಬ : ಸುಳ್ಯ ವಿಧಾನ ಸಭಾ ಕ್ಷೇತ್ರ ಕಾಂಗ್ರೇಸ್ ಉಸ್ತುವಾರಿ ಕಾಂಗ್ರೇಸ್ ಮುಖಂಡ ಪರಾಜಿತ ಎಂಎಲ್‌ಎ  ಅಭ್ಯರ್ಥಿ ಕೃಷ್ಣಪ್ಪ ಜಿ ಅವರು ಸೋಮವಾರ ಕಡಬ ಮಿನಿ ವಿಧಾನ ಸೌಧ ಹಾಗೂ ಇತರ ಕಛೇರಿಗಳಿಗೆ ಭೇಟಿ ನೀಡಿ ಕಡಬ ಅಭಿವೃದ್ಧಿಯ ಬಗ್ಗೆ ಭರವಸೆ ನೀಡಿದರು.

ಮಿನಿ ವಿಧಾನ ಸೌಧಕ್ಕೆ ಭೇಟಿ ನಮ್ಮ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಂಜೂರು ಮಾಡಿತ್ತು,  ಕಾಂಗ್ರೇಸ್ ಕಟ್ಟಿದ ಕಡಬದ ಆಡಳಿತ ಸೌಧ ಮಿನಿ ವಿಧಾನಸೌಧವನ್ನು ಈಗಾಗಲೇ ಮಾಜಿಮುಖ್ಯಮುಖ್ಯಂತ್ರಿಗಳು ಉದ್ಘಾಟಿಸಿದ್ದಾರೆ. ಆದರೆ ಅಲ್ಲಿ ಯಾವುದೇ ಕೆಲಸಗಳು ಆಗಿಲ್ಲ, ಒಳಗಡೆ  ಸರಿಯಾದ ವ್ಯವಸ್ಥೆಯಿಲ್ಲ. ಮುಖ್ಯವಾಗಿ ಅಲ್ಲಿಗೆ ಪೀಠೋಪಕರಣ ಇನ್ನಿತರ ಸೌಲಭ್ಯಗಳನ್ನು ನೀಡಿಲ್ಲ. ಈ ಬಗ್ಗೆ ನಮ್ಮ ಸಚಿವರಲ್ಲಿ ಮಾತನಾಡುತ್ತೇನೆ, ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ, ಮಿನಿ ವಿಧಾನ ಸೌಧಕ್ಕೆ ಬೇಕಾದ ಸವಲತ್ತುಗಳನ್ನು ಸರಕಾರದಿಂದ ಒದಗಿಸಿ ಉನ್ನತಮಟ್ಟದಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ಕೃಷ್ಣಪ್ಪ ಅಕ್ರಮ ಸಕ್ರಮ, 94 ಸಿ ಯಂತಹ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಿ ಹಕ್ಕು ನೀಡುವಲ್ಲಿ ಅಧಿಕಾರಿಗಳು ವಿಳಂಭ ಮಡಬಾರದು ಎಂದು ಹೇಳಿದರು.

ಪ್ರಕೃತಿ ವಿಕೋಪ ಸಂದರ್ಭದಲ್ಲಿ  ನಿರ್ವಹಣೆಯ ಕುರಿತು  ಅಧಿಕಾರಿಗಳು ತೆಗೆದುಕೊಂಡ ಕ್ರಮ ಗಳ ಬಗ್ಗೆ ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದಿದ್ದೇನೆ, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಕಡಬದ ಜನತೆಯೊಂದಿಗೆ ನಾನಿದ್ದೇನೆ,  ಮುಂದಿನ ದಿನಗಳಲ್ಲಿ ನೂತನ ಸರಕಾರದಿಂದ ಕಡಬಕ್ಕೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಬದ್ದನಾಗಿದ್ದೇನೆ ಎಂದರು.



































 
 

ಕಡಬ ಉಪತಹಸೀಲ್ದಾರ್ ಮನೋಹರ ಕೆ.ಟಿ ಮಾಹಿತಿ ನೀಡಿದರು.  ಕೃಷ್ಣಪ್ಪ ಅವರೊಂದಿಗೆ ಕಡಬ ಕಾಂಗ್ರೇಸ್ ಮುಖಂಡಾರದ ಫಝಲ್ ಕೋಡಿಂಬಾಳ,   ಸರ್ವೋತ್ತಮ  ಗೌಡ, ರಾಯ್ ಅಬ್ರಹಾಂ,  ಯತೀಶ್ ಬಾನಡ್ಕ, ಪೀರ್ ಮಹಮ್ಮದ್ ಸಾಹೇಬ್ ಫಝಲ್ ಕೋಡಿಂಬಾಳ, ಅಶ್ರಫ್  ಶೇಡಿಗುಂಡಿ , ಹನೀಫ್ ಕೆ.ಎಂ, ಎಚ್ ಅದಂ, ಎಂ.ಪಿ.ಯೂಸೂಪ್,ಶಾಕೀರ್, ಅಬೂಬ್‌ಕರ್ ನೆಕ್ಕರೆ, ಶಿವರಾಮ ರೈ ಸುಬ್ರಹ್ಮಣ್ಯ, ಲೋಲಾಕ್ಷ, ಬಾಬು ಮುಗೇರ, ಪದ್ಮನಾಭ ಎಡಮಂಗಲ, ಜಗದೀಶ ರೈ, ಕೀರ್ತನ್ ಗೌಡ ಇಸ್ಮಾಯಿಲ್ ನೆಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು. 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top