ಬೆಂಗಳೂರು: ಈಗಾಗಲೇ ಕಾಂಗ್ರೆಸ್ ಸರಕಾರ ಗೃಹಜ್ಯೋತಿ ಸ್ಕೀಂನಲ್ಲಿ ಎಲ್ಲರಿಗೂ 200 ಯುನಿಟ್ ತನಕ ುಚಿತ ವಿದ್ಯುತ್ ಘೋಷಣೆ ಮಾಡಿದ ಬೆನ್ನಲ್ಲೇ ಪ್ರತಿ ಯುನಿಟ್ ಗೆ 70 ಪೈಸೆಯಷ್ಟು ಹೆಚ್ಚಳ ಮಾಡಿ ನಷ್ಟ ಭರ್ತಿ ಮಾಡಲು ಗ್ರಾಹಕರಿಗೆ ಬರೆ ಹಾಕಲು ಮುಂದಾಗಿದೆ.
ಜೂ.1 ರಿಂದಲೇ ಜ್ಯಾರಿಗೆ ಬರುವಂತೆ ಸರಕಾರ ಇದೀಗ ಆದೇಶ ಹೊರಡಿಸಿದೆ.
ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ ಪ್ರತಿ ಯುನಿಟ್ ಗೆ 70 ಪೈಸೆ ಹೆಚ್ಚಳ ಮಾಡಿದ್ದು, ವಿದ್ಯುತ್ ಸರಬರಾಜು ಕಂಪೆನಿಗಳಿಗೆ ನಷ್ಟದ ಕಾರಣ ನೀಡಿ ಈ ಹೆಚ್ಚಳ ಮಾಡಿದೆ.