ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜನಜಾಗೃತಿಗಾಗಿ ಅಭಿಯಾನ ಆಂದೋಲನ “ವಿವೇಕ ಸಂಜೀವಿನಿ” ತರಬೇತುದಾರರ ತರಬೇತಿ ಶಿಬಿರ ಜೂ.5 ರಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆಯಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಬರುವ 29 ಕ್ಯಾಂಪಸ್‍ನ ಎಲ್ಲಾ ಶಾಲೆಗಳ ಮಕ್ಕಳನ್ನು ಸೇರಿಸಿಕೊಂಡು ಈ ಆಂದೋಲನವನ್ನು ಮಾಡಲಾಗುವುದು. ಈ ಆಂದೋಲನ ಅಂಗವಾಗಿ ಪ್ರತೀ ವಿದ್ಯಾರ್ಥಿಗೊಬ್ಬರಂತೆ ಎರಡು ಎರಡು ಔಷಧೀಯ ಗಿಡ ಬೀಜಗಳನ್ನು, ನೀಡಲಾಗುವುದು. ಅವರು ತಮ್ಮ ಮನೆಗಳಲ್ಲಿ ಚಟ್ಟಿಯಲ್ಲಿ, ಜಾಗವಿದ್ದರೆ ಅಲ್ಲಿ ಬಿತ್ತಿ ಪೋಷಿಸಬೇಕು. ಅದು ಚಿಗುರೊಡೆದು ಎಲೆಗಳು ಹರಡಿಕೊಂಡ ಬಳಿಕ ದರ ಜತೆ ಸೆಲ್ಫಿ ತೆಗೆದುದುಕೊಳ್ಳಬೇಕು. ಒಟ್ಟಾರೆಯಾಗಿ ಈ ಆಂದೋಲನವನ್ನು ಹಬ್ಬದ ರೂಪದಲ್ಲಿ ಮಾಡಲಾಗುವುದು ಎಂದ ಅವರು, ಕ್ಯಾಂಪಸ್ ಶಾಲೆಗಳ 150 ಶಿಕ್ಷಕರು ಹಾಗೂ ಹೊರಗಿನವರು ಸೇರಿ ಒಟ್ಟು 200 ಮಂದಿಗೆ ಶಿಕ್ಷಕರಿಗೆ ತರಬೇತು ನೀಡಲಾಗುವುದು ತಿಳಿಸಿದರು.
ಬೆಳಿಗ್ಗೆ 9.30 ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಬೆಂಗಳೂರು ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಷಿನಲ್ ಆರೋಮೆಟಿಕ್ಸ್ ಪ್ಲಾಂಟ್ ನ ಹಿರಿಯ ವಿಜ್ಞಾನಿ ಡಾ.ದಿನೇಶ್ ನಾಗೇಗೌಡ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಉರಗ ತಜ್ಞ ಡಾ.ರವೀಂದ್ರನಾಥ ಐತಾಳ್ ಹಾಗೂ ಔಷಧೀಯ ಸಸ್ಯಗಳ ಸಂರಕ್ಷಕ ದಿನೇಶ್ ನಾಯ್ಕ ವಿಟ್ಲ ಅವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಸಂಜೆ 3.30 ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ವಹಿಸಲಿದ್ದು, ಕರ್ನಾಟಕ ಪ್ರಾಂತ ಗ್ರಾಮ ವಿಕಾಸ ಸಂಯೋಜಕ ಬಾಲಕೃಷ್ಣ ಕಿಣಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಯೋಜಕಿ ರೂಪಲೇಖಾ, ವೆಂಕಟ್ರಮಣ ರಾವ್ ಮಂಕುಡ ಉಪಸ್ಥಿತರಿದ್ದರು.