ಪುತ್ತೂರು: ಅಖಿಲ ಕನಾ೯ಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಪಧಾಧಿಕಾರಿಗಳ ಸಭೆ ಪುತ್ತೂರಿನ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾ ಕಚೇರಿ ಸಭಾಂಗಣದಲ್ಲಿ ನಡೆಯಿತು.
ವೇದಿಕೆಯ ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೂಜ್ಯ ಖಾವಂದರ ಮಾಗ೯ದಶ೯ನದಲ್ಲಿ ವೇದಿಕೆ ಮೂಲಕ ರಾಜ್ಯಾದ್ಯಂತ ಮದ್ಯವಜ೯ನ ಶಿಬಿರ, ತಂಬಾಕು ವಿರೋಧಿ ದಿನಾಚರಣೆ, ಮಾದಕ ವಸ್ತು ವಿರೋಧಿ ದಿನಾಚರಣೆ, ನವಜೀವನ ಸಮಿತಿ ಸಮಾವೇಶ, ವಿದ್ಯಾಥಿ೯ಗಳಿಗೆ ಸ್ವಸ್ಥ್ಯಾ ಸಂಕಲ್ಪ ಕಾಯ೯ಕ್ರಮ, ಗಾಂಧಿ ಜಯಂತಿ ಕಾಯ೯ಕ್ರಮ, ವಿಪತ್ತು ನಿವ೯ಹಣೆ, ಗಿಡನಾಟಿ ಕಾಯ೯ಕ್ರಮ ಹೀಗೆ ಹತ್ತು ಹಲವು ಕಾಯ೯ಕ್ರಮಗಳನ್ನು ನಡೆಸಲಾಗುತ್ತಿದೆ. ತಾಲೂಕಿನಲ್ಲಿ ಯಾವ ವಲಯದಲ್ಲಿ ಈ ಕಾಯ೯ಕ್ರಮವನ್ನು ನಡೆಸುವುದಾಗಿ ಕ್ರಿಯಾ ಯೋಜನೆ ತಯಾರಿಸಿ ಚಚಿ೯ಸಲಾಯಿತು.
ತಾಲೂಕಿನಲ್ಲಿ ಜೂನ್ ತಿಂಗಳಿನಲ್ಲಿ ಗಿಡನಾಟಿ ಕಾಯ೯ಕ್ರಮ, ವಿಪತ್ತು ನಿವ೯ಹಣಾ ಕಾಯ೯ಕ್ರಮ, ತಂಬಾಕು ವಿರೋಧಿ ದಿನಾಚರಣೆ, ಮಾದಕ ವಸ್ತು ವಿರೋಧಿ ಆಚರಣೆಯನ್ನು ಪ್ರತಿ ವಲಯದಲ್ಲಿ ನಡೆಸುವುದಾಗಿ ತೀಮಾ೯ನಿಸಲಾಯಿತು. ಸೆಪ್ಟೆಂಬರ್ ತಿಂಗಳಿನಲ್ಲಿ ಪುತ್ತೂರಿನಲ್ಲಿ ಮಧ್ಯವಜ೯ನ ಶಿಬಿರ ನಡೆಸುವುದಾಗಿ ಮತ್ತು ಜೂನ್ ತಿಂಗಳ ಪ್ರಥಮ ವಾರದಲ್ಲಿ ನವಜೀವನ ಸಮಿತಿ ಸಮಾವೇಶ ಮತ್ತು ತಾಲೂಕು ವೇದಿಕೆಯ ನೂತನ ಅಧ್ಯಕ್ಷರಿಗೆ ಅಭಿನಂದನಾ ಕಾಯ೯ಕ್ರಮ ನಡೆಸುವುದಾಗಿ ತೀಮಾ೯ನಿಸಲಾಯಿತು.
ಈ ಸಂದಭ೯ದಲ್ಲಿ ಅಖಿಲ ಕನಾ೯ಟಕ ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಲೋಕೇಶ್ ಹೆಗ್ಡೆ ಮಾತನಾಡಿ, ಪೂಜ್ಯರ ಜನಜಾಗೃತಿ ಕಾಯ೯ಕ್ರಮವನ್ನು ತಾಲೂಕಿನಲ್ಲಿ ಎಲ್ಲರ ಸಹಕಾರವನ್ನು ಪಡೆದು ಉತ್ತಮವಾಗಿ ಸಂಘಟಿಸುವಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಮಾಜಿ ಜಿಲ್ಲಾ ಅಧ್ಯಕ್ಷ ಶಶಿಕುಮಾರ್ ಬಾಲ್ಯೊಟ್ಟು, ಮಾಜಿ ತಾಲೂಕು ಅಧ್ಯಕ್ಷರಾದ ಮಹಾಬಲ ರೈ ವಳತ್ತಡ್ಕ, ಕೋಶಾಧಿಕಾರಿ ಪ್ರವೀಣ್ ಚಂದ್ರ ಆಳ್ವ, ಸದಾನಂದ ಬನ್ನೂರು , ಜಿಲ್ಲಾ ನಿದೇ೯ಶಕ ಪ್ರವೀಣ್ ಕುಮಾರ್, ತಾಲೂಕು ಯೋಜನಾಧಿಕಾರಿ ಶಶಿಧರ್ ಎಮ್, ಜನಜಾಗೃತಿ ಯೋಜನಾಧಿಕಾರಿ ಗಣೇಶ್, ಶಿಭಿರಾಧಿಕಾರಿ ದಿವಾಕರ್, ವಲಯ ಮೇಲ್ವಿಚಾರಕರು, ಕೃಷಿ ಅಧಿಕಾರಿಗಳು ಹಾಗೂ ಆಂತರಿಕ ಲೆಕ್ಕಪರಿಶೋಧಕರು ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿಗಳಾದ ಶಶಿಧರ್ ಎಮ್ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ಉಮೇಸ್ ಬಿ ವಂದಿಸಿದರು.