ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗದ ಪ್ರಾರಂಭೋತ್ಸವ

ಪುತ್ತೂರು: ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಾಥಮಿಕ ವಿಭಾಗದಲ್ಲಿ 2023 24ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಮೇ 31ರಂದು ನಡೆಯಿತು.

ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಬ್ಯಾಂಡ್ ವಾಲಗದೊಂದಿಗೆ ಶಾಲೆಯೊಳಗೆ ಬರಮಾಡಿಕೊಳ್ಳಲಾಯಿತು. ಶಿಕ್ಷಕಿಯರು ಮಕ್ಕಳಿಗೆ ಆರತಿ ಬೆಳಗಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಪನ್ನೆ, ಕೆಪಿಎಸ್  ನ ಅಧ್ಯಕ್ಷರಾದ ಶ್ರೀನಾಥ್ ಬಾಳಿಲ ಮತ್ತು ಎಸ್ ಡಿ ಎಂ ಸಿ ಸದಸ್ಯರು  ಮಕ್ಕಳಿಗೆ ಹೂ ನೀಡುವುದರ ಮೂಲಕ ಶಾಲೆಗೆ ಸ್ವಾಗತಿಸಿದರು. 

ನಂತರ  2023-24 ನೇ ಸಾಲಿನ ಶೈಕ್ಷಣಿಕ ವರ್ಷದ  ರೂಪರೇಷೆಗಳ ಬಗೆಗೆ ಪೋಷಕರ ಸಭೆ ನಡೆಸಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು  ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ ಇವರು ವಹಿಸಿಕೊಂಡಿದ್ದರು. ಸಭೆಯ ಅತಿಥಿ ಸ್ಥಾನವನ್ನು  ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಚಂದ್ರಶೇಖರ ಪನ್ನೆ ವಹಿಸಿಕೊಂಡಿದ್ದು, ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಸ್ಥೆಗೆ ದಾಖಲಾತಿ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 































 
 

ಮತ್ತೋರ್ವ ಅತಿಥಿಗಳಾದ ಕೆಪಿಎಸ್ನ ಉಪ ಪ್ರಾಂಶುಪಾಲರಾದ  ಉಮಾಕುಮಾರಿ ಇವರು ಶಾಲೆಯ ಪ್ರಗತಿಗೆ ಶ್ರಮಿಸುತ್ತಿರುವ ಶಾಲಾ ಮೇಲುಸ್ತುವಾರಿಯ ಕಾರ್ಯವನ್ನು ಶ್ಲಾಘಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ, ಎಸ್ ಡಿ ಎಂ ಸಿ ನಾಮನಿರ್ದೇಶಿತ ಸದಸ್ಯರಾದ ಪ್ರದೀಪ್ ರೈ ಪನ್ನೆ  ಇವರು ಮಾತನಾಡಿ, ಶಾಲೆ  ಎಂದರೆ ಬರೀ  ವಿದ್ಯಾರ್ಥಿ ಮತ್ತು  ಶಿಕ್ಷಕರಿಂದಲ್ಲ, ಶಾಲೆ  ಪ್ರಗತಿ  ಕಾಣಬೇಕಾದರೆ  ವಿದ್ಯಾರ್ಥಿಗಳು, ಪೋಷಕರು  ಮತ್ತು  ಶಾಲಾಭಿವೃದ್ಧಿ ಸಮಿತಿಯ  ಒಟ್ಟುಗೂಡುವಿಕೆ  ಅಗತ್ಯ ಎಂದರು. 

ಬಳಿಕ ಸರಕಾರದಿಂದ ದೊರೆಯುವ ಪ್ರೋತ್ಸಾಹಕಗಳಾದ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು  ಅತಿಥಿಗಳು ವಿದ್ಯಾರ್ಥಿಗಳಿಗೆ ವಿತರಿಸಿದರು. 

ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಭವ್ಯ, ಶ್ರೀಮತಿ ವೀಣಾ,  ಶ್ರೀ ಮಣಿಕಂಠ,  ಎಸ್ ಡಿ ಎಂ ಸಿ ಸಿವಿಲ್ ಕಾಮಗಾರಿ ಸಮಿತಿ ಅಧ್ಯಕ್ಷರಾದ   ಹರ್ಷ ಜೋಗಿ ಬೆಟ್ಟು, ಎಸ್ ಡಿ ಎಂ ಸಿ ಸದಸ್ಯರಾದ ಶ್ರೀ ಮುರಳಿ,  ಶ್ರೀ ಮಹಮ್ಮದ್ ಹಾರಿಫ್, ಶ್ರೀಮತಿ ಪಾರ್ವತಿ, ಶ್ರೀಮತಿ ನೆಸೀಮಾ,  ತಾಯಂದಿರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಪ್ರಿಯಾಂಕ, ಉಪಸ್ಥಿತರಿದ್ದರು.

ಶಾಲಾ ಮುಖ್ಯ್ಯೊಪಾಧ್ಯಾಯರಾದ ಮಾಯಿಲಪ್ಪ ಜಿ  ಸ್ವಾಗತಿಸಿ, ಪ್ರಾಸ್ತಾವಿಕ  ಮಾತುಗಳನ್ನಾಡಿದರು.  ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕರಾದ ದಿನೇಶ್ ಮಾಚಾರ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.  

ಬೇಸಿಗೆ ರಜೆಯನ್ನು ಮುಗಿಸಿ ಶಾಲೆಯತ್ತ ಮರಳಿದ ವಿದ್ಯಾರ್ಥಿಗಳನ್ನು ಖುಷಿಪಡಿಸಲು ಸೆಲ್ಫಿ ಕಾರ್ನರನ್ನು ಇಡಲಾಗಿತ್ತು. ಇಲ್ಲಿ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಆನಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top