ಪುತ್ತೂರು: ಒಮ್ಮಿಂದೊಮ್ಮೆಗೆ ಬಂದೆರಗುವ ತೀವ್ರ ತೆರನಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಡಾ.ಪ್ರಭು’ಸ್ ಕೇರ್ ಆ್ಯಂಡ್ ಕ್ಯೂರ್ ಸ್ಪೆಶಾಲಿಟಿ ಕ್ಲಿನಿಕ್ ಹಾಗೂ ಎ.ಎನ್. ಮೆಡಿಕಲ್ಸ್ ಪುತ್ತೂರು ಕೋಟಿ – ಚೆನ್ನಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದ ಕೇಶವಶ್ರೀ ಶಾಪಿಂಗ್ ಮಾಲ್ ನಲ್ಲಿ ಜೂನ್ 1ರಂದು ಶುಭಾರಂಭಗೊಂಡಿತು.
ತಕ್ಷಣದಲ್ಲಿ ಕಾಡುವ ಸ್ಟ್ರೋಕ್, ಕಾರ್ಡಿಯಾಕ್ (ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆ), ನ್ಯೂರೋ (ನರ), ರೆಸ್ಪಿರೇಟರಿ (ಉಸಿರಾಟ) ಮೊದಲಾದ ಸಮಸ್ಯೆಗಳಿಗೆ ತಜ್ಞ ವೈದ್ಯರಾದ ಡಾ. ಪ್ರಭು ಚಿಕಿತ್ಸೆ ನೀಡಲಿದ್ದಾರೆ.
ವೈದ್ಯರ ಹೆತ್ತವರಾದ ಅನಿಲಾವತಿ, ಪಿ. ನಾರಾಯಣ ಜೊತೆಯಾಗಿ ಮಳಿಗೆ ಉದ್ಘಾಟಿಸಿದರು. ಆಸ್ಟ್ರಲಾಜರ್ ವರ್ಧಮಾನ್ ಜೈನ್ ದೀಪ ಬೆಳಗಿಸಿದರು. ಶಾಸಕ ಅಶೋಕ್ ಕುಮಾರ್ ರೈ ಅವರು ಭೇಟಿ ನೀಡಿ, ಹಾರೈಸಿದರು.
ಪುರಸಭೆಯ ಅಧ್ಯಕ್ಷರಾಗಿದ್ದ ರಾಜೇಶ್ ಬನ್ನೂರು ಅಧ್ಯಕ್ಷತೆ ವಹಿಸಿ, ಶುಭಹಾರೈಸಿದರು. ಮುಕ್ರಂಪಾಡಿ ಸಾಂತೋಮ್ ಗುರು ಮಂದಿರದ ಧರ್ಮಗುರು ವಂ. ಫಾ. ಸನ್ನಿ ಅಲಪತ್ತ್ ಹಾಗೂ ಕೊಳ‍್ತಿಗೆ ಮದ್ರಾಸಿ ಮೊಯಿದ್ದೀನ್ ಜುಮ್ಮಾ ಮಸೀದಿ ಗುರು ಇಲ್ಯಾಸ್ ಇರ್ಫಾನಿ ಸಾಲ್ಮರ ಮಾತನಾಡಿ, ಶುಭಾಶೀರ್ವಾದ ಮಾಡಿದರು.
ವೈದ್ಯ ಡಾ. ಪ್ರಭು ಮಾತನಾಡಿ, ದೀರ್ಘಕಾಲೀನ ವಾಸಿಯಾಗದ ಗಾಯ, ತಕ್ಷಣದಲ್ಲಿ ಕಾಡುವ ಹೃದಯ ಸಂಬಂಧಿ ಕಾಯಿಲೆ, ಇಸಿಜಿ, ನೆಬ್ಯುಲೈಶೇಷನ್ ಮೊದಲಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದ ಅವರು, ಎಲ್ಲರ ಸಹಕಾರ ಕೋರಿದರು.
ಕೇಶವಶ್ರೀ ಶಾಪಿಂಗ್ ಮಾಲ್ ಮಾಲಕ ಸಂಕೀರ್ಣದ ಮಾಲಕ ಅಜಿತ್ ನಾಯಕ್ ಮತ್ತು ಪ್ರಕಾಶ್ ನಾಯಕ್ ಉಪಸ್ಥಿತರಿದ್ದರು.
ಜಯಲಕ್ಷ್ಮಿ ಪ್ರಾರ್ಥಿಸಿದರು. ಕಾರ್ಯಕ್ರಮ ನಿರೂಪಿಸಿದರು. ಪಿ.ವಿ. ಸುಬ್ರಮಣಿ ವಂದಿಸಿದರು.
ಡಾ.ಪ್ರಭು’ಸ್ ಕೇರ್ ಆ್ಯಂಡ್ ಕ್ಯೂರ್ ಸ್ಪೆಶಾಲಿಟಿ ಕ್ಲಿನಿಕ್ ಶುಭಾರಂಭದ ಪ್ರಯುಕ್ತ ಮಧ್ಯಾಹ್ನದವರೆಗೆ ಬಿ.ಪಿ., ಶುಗರ್ ಹಾಗೂ ಅನೇಮಿಯಾ ಸ್ಕ್ರೀನಿಂಗ್ ತಪಾಸಣೆಯನ್ನು ಉಚಿತವಾಗಿ ಮಾಡಲಾಯಿತು.
ಮೆಡಿಕಲ್ :
ಡಾ.ಪ್ರಭು’ಸ್ ಕೇರ್ ಆ್ಯಂಡ್ ಕ್ಯೂರ್ ಸ್ಪೆಶಾಲಿಟಿ ಕ್ಲಿನಿಕ್ ಜೊತೆಯಲ್ಲೇ ಮೆಡಿಕಲ್ ಕೂಡ ಇದೇ ಸಂದರ್ಭ ಉದ್ಘಾಟನೆಗೊಂಡಿತು. ಇಲ್ಲಿ ಅಲೋಪಥಿ, ಆಯುರ್ವೇದ, ಜನರಿಕ್, ವೆಟರ್ನರಿಗೆ ಸಂಬಂಧಪಟ್ಟ ಔಷಧಗಳು ಲಭ್ಯ. ಇದರೊಂದಿಗೆ ಸರ್ಜಿಕಲ್ ಉತ್ಪನ್ನಗಳು ಕೂಡ ಲಭ್ಯವಿವೆ.