ಸಾಮಾಜಿಕ ಜಾಲತಾಣಗಳಲ್ಲಿ  ಒಂದು ಪಕ್ಷರ ಪರ ಪ್ರಚಾರ ಮಾಡುತ್ತಿರುವ ಗ್ರಂಥ ಪಾಲಕರನ್ನು ಕೆಲಸದಿಂದ ವಜಾ ಮಾಡುವಂತೆ ಮನವಿ

ಪುತ್ತೂರು: ಪುತ್ತೂರು ಸರಕಾರಿ ಪದವಿಪೂರ್ವ ಕಾಲೇಜಿನ ಗ್ರಂಥಪಾಲಕ ಪ್ರವೀಣ್ ವಗ್ಗ ಒಂದು ರಾಜಕೀಯ ಪಕ್ಷದ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದು ತಕ್ಷಣ ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಆಗ್ರಹಿಸಿದೆ.

ಸರಕಾರಿ ಒದ್ಯೋಗಿಯಾಗಿದ್ದ ಈ ರೀತಿಯಾಗಿ ಒಂದು ಪಕ್ಷದ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪು. ಯಾವುದೇ ಪಕ್ಷದ ಪರ ಇರುವಂತಿಲ್ಲ. ಬೇರೆ ಬೇರೆ ಧರ್ಮ ಜಾತಿಗಳ ವಿದ್ಯಾರ್ಥಿಗಳರುವ ಈ ಕಾಲೇಜನಲ್ಲಿ ಒಬ್ಬರು ಅಧ್ಯಾಪಕರು ಈ ರೀತಿ ನಡೆದುಕೊಂಡಿರುವುದು ತಪ್ಪು ಇದನ್ನು ಗಂಭಿರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಈ ಕುರಿತು ಪುತ್ತೂರು ನಗರ ಠಾಣೆ ಹಾಗೂ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಮಾಡಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top