ಪುತ್ತೂರು : ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ 2023-24ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಬುಧವಾರ ಆಚರಿಸಲಾಯಿತು.
ಮೊದಲಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಸೊರಂಪಳ್ಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ.ಜಿ, ಮಾಣಿಲ ಗ್ರಾ.ಪಂ ಸದಸ್ಯ ಶ್ರೀಧರ ಬಾಳೆಕಲ್ಲು, ಎಸ್ ಡಿ ಎಂಸಿ ಸದಸ್ಯ ವಿಷ್ಣು ಕನ್ನಡಗುಳಿ ಮಕ್ಕಳಿಗೆ ಶುಭ ಹಾರೈಸಿದರು. ಮುಖ್ಯಶಿಕ್ಷಕ ಭುವನೇಶ್ವರ್ ಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಸಮಗ್ರ ಕಾರ್ಯಯೋಜನೆ, ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾ.ಪಂ ಸದಸ್ಯರಾದ ವಿಷ್ಣು ಕೊಮ್ಮುಂಜೆ, ಶಾಲಾ ಸ್ಥಳ ದಾನಿ, ಹಿರಿಯರೂ ಆದ ಮಹಾಬಲ ಭಟ್ ಮುರುವ, ಎಸ್ ಡಿ ಎಂಸಿ ಸದಸ್ಯೆ ಹರಿಣಾಕ್ಷಿ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಸಹಭಾಗಿಗಳಾದರು. ಶಿಕ್ಷಕಿ ಕವಿತಾ. ಕೆ ಸ್ವಾಗತಿಸಿದರು. ದೈ ಶಿ. ಶಿಕ್ಷಕ ಉಮಾನಾಥ ರೈ ವಂದಿಸಿದರು. ಶಿಕ್ಷಕ ಸುಧೀಶ್ ಕೆ ಕಾರ್ಯಕ್ರಮ ನಿರೂಪಿಸಿದರು..
.