ಕಡಬ ತಾಲೂಕು ಕಛೇರಿಯಲ್ಲಿ 5 ತಿಂಗಳಾದರೂ ವಿಲೇವಾರಿವಾಗದ 94ಸಿ ಕಡತ! ಪ್ರಶ್ನಿಸಿದ ಪತ್ರಕರ್ತನಿಗೆ ದಬಾಯಿಸಿದ ತಾಲೂಕು ಕಛೇರಿ ಸಿಬ್ಬಂದಿ

ಕಡಬ: ಕಡಬ ತಾಲೂಕು ಕಚೇರಿಯಲ್ಲಿ ವಿಲೇವಾರಿಯಾಗದೆ ಉಳಿದ 94 ಸಿ ಕಡತದ ಬಗ್ಗೆ ವಿಚಾರಿಸಲು ತೆರಳಿದ ಪತ್ರಕರ್ತರಿಗೆ ಕಡತ ವಿಲೇವಾರಿ ಸಿಬಂದಿ ಅನುಚಿತವಾಗಿ ವರ್ತಿಸಿದ ಅರೋಪ ವ್ಯಕ್ತವಾಗಿದೆ. 

ಕಳೆದ 5 ತಿಂಗಳ ಹಿಂದೆ ಸುಬ್ರಹ್ಮಣ್ಯದ ಮಹಿಳೆಯೋರ್ವರು 94 ಸಿ ಅರ್ಜಿ ಸಲ್ಲಿಸಿದ್ದರು.  ಬಳಿಕ ಕುಂಟುತ್ತಾ ಸಾಗುತ್ತಾ ವಿಲೇವಾರಿಯಾಗಲಿಲ್ಲ. ಈ ಬಗ್ಗೆ ಸುಬ್ರಹ್ಮಣ್ಯ ಗ್ರಾಮದ ಕಡತ ವಿಲೇವಾರಿ ಮಾಡುವ ಸಿಬ್ಬಂದಿ ಬಳಿ ತೆರಳಿ  ಕಡಬದ ಪತ್ರಕರ್ತರೋರ್ವರು  ವಿಚಾರಿಸುವ  ವೇಳೆ  ಪತ್ರಕರ್ತ ಎಂದು ಪರಿಚಯಿಸಿಕೊಂಡಿದ್ದಾರೆ.

ಪತ್ರಕರ್ತರು ಎಂದು ಪರಿಚಯಿಸಿಕೊಂಡು ಇಲ್ಲಿಗೆ ಬರಬೇಡಿ ಎಂದು ದಬಾಯಿಸಿದ್ದಾರೆ. ಅಲ್ಲದೆ ಕಡತ ಬೇಕಾದರೆ ಉಪತಹಸೀಲ್ದಾರ , ಟಪಾಲು ನಿರ್ವಹಣೆ ಮಾಡುವ ಸಿಬ್ಬಂದಿ ಜೊತೆ  ಅಲ್ಲಿ ವಿಚಾರಿಸಿ, ನಾನು ಆ ದಾಖಲೆಯನ್ನು ವಿಲೇವಾರಿ ಮಾಡುವುದಿಲ್ಲ ಎಂದು ದಬಾಯಿಸಿದ್ದಾರೆ. ಈ ಬಗ್ಗೆ ತಹಸೀಲ್ದಾರ ಮತ್ತು ಉಪತಹಸೀಲ್ದಾರ ಅವರಿಗೆ ಮೌಖಿಕ ದೂರು ನೀಡಿದ್ದು, ಕಡತ ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದರಲ್ಲದೆ ಈ ಬಗ್ಗೆ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸಭ್ಯತೆಯಿಂದ ವರ್ತಿಸಲು ತಿಳಿ ಹೇಳುವುದಾಗಿ ತಹಸೀಲ್ದಾರ್ ಪತ್ರಕರ್ತರಿಗೆ ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top