ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಯಕ್ಷಗಾನ ಕಲಾ ಸಂಘ “ಯಕ್ಷಸಿಂಚನ“ ಉದ್ಘಾಟನೆಗೊಂಡಿತು.
ಹನುಮಗಿರಿ ಯಕ್ಷಗಾನ ಮೇಳದ ಖ್ಯಾತ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಉದ್ಘಾಟಿಸಿ, ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಗೆಜ್ಜೆಗಿರಿ ಮೇಳದ ಪ್ರಧಾನ ಭಾಗವತ ಗಿರೀಶ್ ರೈ ಕಕ್ಕೆಪದವು ಮುಖ್ಯ ಅಥಿತಿಗಳಾಗಿ ಶುಭಕೋರಿದರು. ಈ ಸಂದರ್ಭದಲ್ಲಿ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಮತ್ತು ಗಿರೀಶ್ ರೈ ಕಕ್ಕೆಪದವು ತಮ್ಮ ಸುಮಧುರ ಕಂಠದಿಂದ ಭಾಗವತಿಕೆ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಕಾಲೇಜಿನ ಸಂಚಾಲಕ ಜಯಂತ ನಡುಬೈಲು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ ಹಾಗೂ ಆಡಳಿತಾಧಿಕಾರಿ ಅರ್ಪಿತ್ ಟಿ.ಎ. ಉಪಸ್ಥಿತರಿದ್ದರು. ಯಕ್ಷಗಾನ ಕಲಾ ಸಂಘದ ಸಂಚಾಲಕಿ ಪ್ರಭಾವತಿ ಕೆ. ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಕೀರ್ತನ್ ಮತ್ತು ನರೇಂದ್ರ ಯಕ್ಷಗಾನ ನಾಟ್ಯ ಪ್ರಾತ್ಯಕ್ಷತೆ ನೀಡಿದರು. ಜೊತೆ ಕಾರ್ಯದರ್ಶಿ ಭವ್ಯಶ್ರೀ ವಂದಿಸಿದರು. ನವಮಿ ಪ್ರಾರ್ಥಿಸಿದರು. ರೋಹಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.