ಅಭಿಮಾನಿಗಳಿಗೆ ಅಶೋಕ್ ರೈ ಬುದ್ಧಿವಾದ ಹೇಳಲಿ | ಸುಳ್ಯದ ಪ್ರಮಿತ್ ರಾವ್ ಮನೆಗೆ ಭೇಟಿ ನೀಡಿ ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ: ಫೇಸ್ ಬುಕ್ ಬರವಣಿಗೆಯನ್ನು ಆಕ್ಷೇಪಿಸಿ ಅಶೋಕ್ ಕುಮಾರ್ ರೈ ಅವರ ಅಭಿಮಾನಿಗಳು ಹೆಂಗಸು – ಮಕ್ಕಳಿರುವ ಮನೆಗೆ ಭೇಟಿ ನೀಡಿ ಜಗಳ ಮಾಡಿದ್ದು, ಇದು ಸರಿಯಾದ ಕ್ರಮವಲ್ಲ. ಆ ಅಭಿಮಾನಿಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಬುದ್ಧಿವಾದ ಹೇಳಲಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.

ಸುಳ್ಯದ ಜಯನಗರ ನಿವಾಸಿ ಪ್ರಮೀತ್ ರಾವ್ ಅವರು ಫೇಸ್ ಬುಕಿನಲ್ಲಿ ಬರಹ ಬರೆದಿದ್ದು, ಇದನ್ನು ಆಕ್ಷೇಪಿಸಿ ಅಶೋಕ್ ಕುಮಾರ್ ರೈ ಅಭಿಮಾನಿಗಳು ಮೇ 24ರಂದು ತಡರಾತ್ರಿ ಅವರ ಮನೆಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಮೀತ್ ರಾವ್ ಅವರ ಮನೆಗೆ ಭೇಟಿ ನೀಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು, ಅಶೋಕ್ ಕುಮಾರ್ ರೈ ಅವರ ಅಭಿಮಾನಿಗಳ ಕ್ರಮವನ್ನು ಟೀಕಿಸಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ ತಾನಿರುವಾಗ, ಅವರ ಅಭಿಮಾನಿಗಳು ಇಲ್ಲಿ ಬಂದು ಜಗಳ ಮಾಡಿದರೆ ಅದಕ್ಕೆ ಜವಾಬ್ದಾರಿ ಯಾರು? ಉತ್ತರಿಸಬೇಕಾದವರು ಯಾರು? ಅಶೋಕ್ ರೈ ಅಭಿಮಾನಿ ಇರಬಹುದು, ಆದರೆ ಜಗಳ ಮಾಡಲೂ ಅಭಿಮಾನಿಗಳು ಇರಬಾರದು ಎಂದರು.































 
 

ಫೇಸ್ ಬುಕ್ ಬರಹಕ್ಕೆ ಅಲ್ಲೇ ಉತ್ತರ ಕೊಡಬಹುದಿತ್ತು. ಅದನ್ನು ಬಿಟ್ಟು ಅಭಿಮಾನಿಗಳು ಎಂದು ಹೇಳಿಕೊಳ್ಳುವ ಒಂದಷ್ಟು ಮಂದಿ ಮನೆಗೆ ಹೋಗಿ ಜಗಳ ಮಾಡುವುದು ಎಷ್ಟು ಸರಿ? ಮಕ್ಕಳು, ಹೆಂಗಸರು ಇರುವ ಮನೆಗೆ ಹೋಗಿ, ಜಗಳ ಮಾಡುವುದು ಸರಿಯಲ್ಲ. ಫೇಸ್ ಬುಕ್ ಬರಹಗಳನ್ನು ಇಷ್ಟು ಗಂಭೀರ ಮಾಡಿದರೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಅಶೋಕ್ ಕುಮಾರ್ ರೈ ಅವರು ಆ ಯುವಕರಿಗೆ ತಿಳಿಹೇಳಬೇಕು. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top