ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕಿನ ಕರ್ನೂರು ಒಕ್ಕೂಟದ ವತಿಯಿಂದ ಕಬಡ್ಡಿ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ವಿದ್ಯಾರ್ಥಿನಿಯರಾದ ಕುಮಾರಿ ಪ್ರನ್ವಿಕಾ ರೈ, ಕುಮಾರಿ ಯತೀಕ್ಷ ರೈ ಹಾಗೂ ಕೃತಿಕಾ ಜಿ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷೆ ಆಶಾಲತಾ ರೈ, ಅರಿಯಡ್ಕ ವಲಯ ಅಧ್ಯಕ್ಷ ದಿನೇಶ್ ರೈ, ಪುತ್ತೂರು ತಾಲೂಕು ಆಂತರಿಕ ಲೆಕ್ಕ ಪರಿಶೋಧಕರಾದ ಲತಾ ಮೇಡಂ, ಉಪಾಧ್ಯಕ್ಷ ಸುಬ್ಬಣ್ಣ ರೈ ಕಲ್ಲಾಜೆ, , ವಲಯ ಮೇಲ್ವಿಚಾರಕ ಹರೀಶ್ ಕುಲಾಲ್, ಕರ್ನೂರು ಸೇವಾ ಪ್ರತಿನಿಧಿ ಕುಸುಮ ರೈ, ಮೇನಾಲ ಸೇವಾ ಪ್ರತಿನಿಧಿ ಸುಂದರ ಎನ್, ಈಶ್ವರಮಂಗಲ ಸೇವಾ ಪ್ರತಿನಿಧಿ ವಿದ್ಯಾ ರೈ, ಕರ್ನೂರು ಶಾಲಾ ಮುಖ್ಯ ಶಿಕ್ಷಕ ರಮೇಶ್ ಶಿರ್ಲಾಲ್ ಹಾಗೂ ಸಂಘದ ಪದಾಧಿಕಾರಿಗಳು,ಸರ್ವ ಸದಸ್ಯರು ಉಪಸ್ಥಿತರಿದ್ದರು.
ಉಷಾ ಗುತ್ತು ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಪ್ರಮೀಳಾ ರೈ ಕಾರ್ಯಕ್ರಮ ನಿರೂಪಿಸಿದರು.