ಪುತ್ತೂರು: ಪುತ್ತೂರಿನಲ್ಲಿ ಕಳೆದ 18 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಮಾನಕ ಜ್ಯುವೆಲ್ಲರರ್ಸ್ ನ ನೂತನ ಬೃಹತ್ ಜ್ಯುವೆಲ್ಲರಿ ಶೋರೂಮ್ ಮೇ.27 ರಂದು ಪುತ್ತೂರು ಮುಖ್ಯರಸ್ತೆಯಲ್ಲಿ ಸಿಪಿಸಿ ಪ್ಲಾಝಾದ ಎದುರು ಉದ್ಘಾಟನೆಗೊಂಡಿತ್ತು.
ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಗಿರಿಧರ್ ನೂತನ ಮಳಿಗೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರ ಸಹೋದರ ಶಿವಶಂಕರ್, ಮಾಜಿ ಪುರಸಭೆ ಅಧ್ಯಕ್ಷರಾದ ರಾಜೇಶ್ ಬನ್ನೂರು, ಗಣೇಶ್ ರಾವ್, ದಯಾರೇಶ್ ಕದಾಮ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಉಲಾಸ್ ಪೈ, ಗಿರಿಧರ್ ಅವರ ಪತ್ನಿ ವಿದ್ಯಾ, ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಜಾಕ್, ಸಂಸ್ಥೆಯ ಮಾಲಕರ ತಾಯಿ ಮಾನಕ ಕಂದಾರೆ ಸಹಿತ ಹಲವಾರು ಮಂದಿ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ಸಹೋದರರಾದ ಸಿದ್ದನಾಥ್ ಕಂದಾರೆ, ಸಹದೇವ್ ಕಂದಾರೆ, ಸನದ್ ಕುಮಾರ್ ಮತ್ತು ಸಂಬಂಧಿಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಅರ್ಚಕ ಜಗದೀಶ್ ಭಟ್ ವೈದಿಕ ಕಾರ್ಯಕ್ರಮ ನಿರ್ವಹಿಸಿದರು.
ಮಳಿಗೆ ವಿಶೇಷ :
ನೂತನ ಮಾನಕ ಜ್ಯುವೆಲ್ಲರ್ಸ್ ಮಳಿಗೆ ಎರಡು ಅಂತಸ್ತನ್ನು ಹೊಂದಿದ್ದು, ಚಿನ್ನಾಭರಣಗಳ ಶೋ ರೂಂ ಹೊಂದಿದೆ. ಈ ನೂತನ ಮಳಿಗೆಯಲ್ಲಿ ಗ್ರಾಹಕರಿಗೆ ವಿಪುಲವಾದ ಆಯ್ಕೆ ಜತೆಗೆ ಹಲವಾರು ಅನುಕೂಲತೆಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ ಬೆಳ್ಳಿಯ ಆಭರಣಗಳಿಗೆ ಪ್ರತ್ಯೇಕ ವಿಭಾಗಗಳಿವೆ.
ವಿಶೇಷ ಆಫರ್‌ಗಳು:
ನೂತನ ಮಳಿಗೆಯ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ ಚಿನ್ನದ ಮೇಲೆ ವಿಶೇಷ ಆಫರ್‌ಗಳನ್ನು ನೀಡಲಾಗಿದೆ. ಮೇ.27ರಿಂದ ಜೂನ್ 31ರವರೆಗೆ ರೂ.10ಸಾವಿರಕ್ಕೂ ಮಿಕ್ಕಿ ಖರೀದಿ ಮೇಲೆ ಕೂಪನ್ ಮೂಲಕ ಬಹುಮಾನ ಘೋಷಿಸಲಾಗಿದೆ. ಕೂಪನ್‌ನಲ್ಲಿ ಪ್ರಥಮ ಬಹುಮಾನವಾಗಿ ರೆಫ್ರಿಜರೇಟರ್, ದ್ವಿತೀಯ ಬಹುಮಾನ ವಾಷಿಂಗ್‌ಮೆಷಿನ್, ತೃತೀಯ ಬಹುಮಾನ ಸ್ಮಾರ್ಟ್ ಟಿವಿ ಗ್ರಾಹಕರಿಗೆ ದೊರೆಯಲಿದೆ. ಅಲ್ಲದೆ ಐದು ಆಕರ್ಷಕ ಬಹುಮಾನಗಳು ಲಭ್ಯವಿದೆ. ಯಾವುದೇ ಆಭರಣ ಕೊಂಡರೂ ವೇಸ್ಟೇಜ್ ಅತ್ಯಲ್ಪವಾಗಿದ್ದು, ಇದು ಮಾರುಕಟ್ಟೆಯಲ್ಲಿಯೇ ಅತ್ಯಲ್ಪ ಪ್ರಮಾಣದ ವೇಸ್ಟೇಜ್ ಆಗಿದ್ದು, ಗ್ರಾಹಕರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಗ್ರಾಹಕರಿಗೆ ಮಾಸಿಕ 500, 1000 ಹಾಗೂ 2000 ರೂ. ಪಾವತಿಯ ಕಂತುಗಳ ಮೂಲಕ ಚಿನ್ನ ಖರೀದಿಸುವ ಅವಕಾಶವೂ ಇದೆ.