ಪುತ್ತೂರು: ಶ್ರೀಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿಟ್ರಸ್ಟ್ ತಾಲೂಕಿನ ನೂತನ ಯೋಜನಾಧಿಕಾರಿಯಾಗಿ ಶಶಿಧರ್ ಎಮ್ ಆಯ್ಕೆಯಾಯಾಗಿದ್ದಾರೆ. ತಾಲೂಕಿನ ಹಿಂದಿನ ಯೋಜನಾಧಿಕಾರಿಯಾಗಿ ಸೇವೆಸಲ್ಲಿಸಿದ ಆನಂದ ಕೆ.ಅವರಿಂದ ಜವಾಬ್ದಾರಿ ಪಡದುಕೊಂಡರು. ತಾಲೂಕಿನಲ್ಲಿ 2 ವಷ೯ ಸೇವೆ ನೀಡಿದ ಆನಂದ ಕೆ. ಯೋಜನೆಯ ಆದೇಶದಂತೆ ಧಮ೯ಸ್ಥಳ ಕೇಂದ್ರ ಕಛೇರಿಯ ಗುಂಪು ಲೆಕ್ಕಪರಿಶೋಧನಾ ವಿಭಾಗಕ್ಕೆ ಯೋಜನಾಧಿಕಾರಿಯಾಗಿ ವಗಾ೯ವಣೆಗೊಂಡಿದ್ದಾರೆ.
ನೂತನ ಯೋಜನಾಧಿಕಾರಿ ಶಶಿಧರ್ ಎಮ್ ಮೂಲತ: ಬೆಳ್ತಂಗಡಿತಾಲೂಕಿನ ಬಂಗಾಡಿಯವರಾಗಿದ್ದು, ಯೋಜನೆಯಲ್ಲಿ 18 ವಷ೯ಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆಸಲ್ಲಿಸಿದ್ದು, ಪ್ರಸ್ತುತ ಮೈಸೂರು ಜಿಲ್ಲೆ, ಎಚ್ ಡಿ ಕೋಟೆ ತಾಲೂಕಿನಲ್ಲಿ ಯೋಜನಾಧಿಕಾರಿಯಾಗಿದ್ದು, ಯೋಜನೆಯಆದೇಶದಂತೆ ಪುತ್ತೂರು ತಾಲೂಕಿಗೆ ವಗಾ೯ವಣೆಗೊಂಡು ಬಂದಿರುತ್ತಾರೆ.
ಈ ಸಂದಭ೯ದಲ್ಲಿ ಜಿಲ್ಲಾ ನಿದೇ೯ಶಕ ಪ್ರವೀಣ್ ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ,, ತಾಲೂಕು ಜನಜಾಗೃತಿ ಅಧ್ಯಕ್ಷ ಲೋಕೇಶ್ ಹೆಗ್ಡೆ ಉಲಾ೯ಡಿ, ಮಾಜಿ ತಾಲೂಕು ಜನಜಾಗೃತಿ ಅಧ್ಯಕ್ಷ ಮಹಾಬಲ ರೈ, ಹಾಗೂ ಕೇಂದ್ರ ಒಕ್ಕೂಟ ಅಧ್ಯಕ್ಷ ಉದಯ್ ಕುಮಾರ್ ಉಪಸ್ಥಿತರಿದ್ದರು.