ವಿಜಯ್‌ ಮಲ್ಯ ಒಡೆತನದಲ್ಲಿದ್ದ ಟಿಪ್ಪುವಿನ ಖಡ್ಗ 145 ಕೋಟಿ ರೂ. ಗೆ ಹರಾಜು

ಬೆಂಗಳೂರು: ಮೈಸೂರಿನ ಹುಲಿ ಎಂದೇ ಖ್ಯಾತರಾಗಿರುವ ಟಿಪ್ಪು ಸುಲ್ತಾನ್ ಗೆ ಸೇರಿದ್ದ ಖಡ್ಗವನ್ನು ಮಂಗಳವಾರ ಲಂಡನ್‌ನ ಬೊನ್ಹಾಮ್‌ನಲ್ಲಿ ಹರಾಜು ಹಾಕಲಾಗಿದ್ದು, ಈ ಖಡ್ಗ ಬರೋಬ್ಬರಿ ರೂ. 145 ಕೋಟಿಗೆ ಹರಾಜಾಗಿದೆ.

ಈ ಹಿಂದೆ ವಿಜಯ್‌ ಮಲ್ಯ ಒಡೆತನದಲ್ಲಿ ಇದ್ದ ಈ ಖಡ್ಗವನ್ನು ಮಲ್ಯ ಅವರಿಂದ ರೂ 1.5 ಕೋಟಿಗೆ ಪಡೆದುಕೊಳ್ಳಲಾಗಿತ್ತು. ಈ ಖಡ್ಗವನ್ನು ಮಲ್ಯ 2004ರಲ್ಲಿ ಕೊಂಡುಕೊಂಡಿದ್ದರು.

ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸದೆ ವಂಚಿಸಿದ ಆರೋಪ ಎದುರಿಸುತ್ತಿರುವ ಮಲ್ಯ ಈ ಖಡ್ಗ ತಮ್ಮ ಕುಟುಂಬಕ್ಕೆ ದುರದೃಷ್ಟವಾಗಿದೆ ಎಂದು ಹೇಳಿಕೊಂಡು ಅದನ್ನು ಮಾರಾಟ ಮಾಡಿದ್ದರು ಎಂದು ವರದಿಯಾಗಿತ್ತು.































 
 

ಈ ಖಡ್ಗದ ಹಿಂದಿನ ಮಾಲಕರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಇಂಗ್ಲೆಂಡ್‌ನ ಹರಾಜು ಸಂಸ್ಥೆ ಬೊನ್ಹಾಮ್ಸ್‌, ಮಾರಾಟಗಾರರ ಮತ್ತು ಖರೀದಿದಾರರ ಹೆಸರುಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಹೇಳಿದೆ.

ಮಲ್ಯ ಖರೀದಿಸಿದ್ದ ಟಿಪ್ಪುವಿನ ಖಡ್ಗ ಹಾಗೂ ಮಂಗಳವಾರ ಹರಾಜುಗೊಂಡ ಖಡ್ಗದಲ್ಲಿ ಕಂಡುಬಂದ ಬರಹಗಳು ಒಂದೇ ರೀತಿಯಾಗಿವೆ. ಈ ಖಡ್ಗವನ್ನು ಮೇಜರ್‌ ಜನರಲ್‌ ಬೇಯರ್ಡ್‌  ಅವರಿಗೆ ನೀಡಲಾಗಿತ್ತು, ಹಾಗೂ ಅದರಲ್ಲಿ ಶಂಶೀರ್-ಇ-ಮಲಿಕ್‌ ಎಂದು ಕೆತ್ತಲಾಗಿತ್ತು. ಈ ಅಕ್ಷರಗಳು ಮಂಗಳವಾರ ಹರಾಜುಗೊಂಡ ಖಡ್ಗದಲ್ಲಿ ಕಂಡು ಬಂದಿದೆ.

ಶ್ರೀರಂಗಪಟ್ಟಣದಲ್ಲಿನ ಟಿಪ್ಪುವಿನ ಮಲಗುವ ಕೋಣೆಯಲ್ಲಿ ಕಂಡುಬಂದಿದ್ದ ಈ ಖಡ್ಗವನ್ನು ಮೇ 4, 1799ರಲ್ಲಿ ಸ್ವಾಧೀನಪಡಿಸಿ ಮೇಜರ್‌ ಜನರಲ್‌ ಬೈಯರ್ಡ್‌ ಅವರಿಗೆ ಸೇನೆ ನೀಡಿತ್ತು.

ಟಿಪ್ಪು ಸುಲ್ತಾನ್ ಶ್ರೀರಂಗಪಟ್ಟಣದ ಮೇಲಿನ ಹಿಡಿತ ಕಳೆದುಕೊಂಡ ನಂತರ ಈಸ್ಟ್‌ ಇಂಡಿಯಾ ಕಂಪೆನಿಯ ಪಡೆಗಳು ನಡೆಸಿದ ಯುದ್ಧದಲ್ಲಿ ಟಿಪ್ಪು ಮೃತಪಟ್ಟ ನಂತರ ಈ ಖಡ್ಗವನ್ನು ಅರಮನೆಯಿಂದ ವಶಪಡಿಸಿಕೊಳ್ಳಲಾಗಿತ್ತು. ಈ ನಂತರ ಈ ಖಡ್ಗ ಹಲವರ ಕೈಸೇರಿತ್ತು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top