ಪುತ್ತೂರು: ಕರಾವಳಿ ಸಿನಿಮಾಸ್ ಲಾಂಛನದಲ್ಲಿ -ಸತೀಶ್ ಪೆರ್ನೆ, ಶಿವಪ್ರಸಾದ್ ಇಜ್ಜಾವು, ನಿರ್ಮಾಣದಲ್ಲಿ, ಹೆಚ್.ಡಿ.ಆರ್ಯ ನಿರ್ದೇಶನದಲ್ಲಿ ತಯಾರಾದ “ಪಿರ್ಕಿಲು” ತುಳು ಸಿನಿಮಾ ಮೇ 26 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಹೆಚ್.ಡಿ.ಆರ್ಯ ತಿಳಿಸಿದ್ದಾರೆ.
ಬುಧವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ರೂಪವಾಣಿ, ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲಿ, ಕಲ್ಪನ, ಮಣಿಪಾಲದಲ್ಲಿ ಭಾರತ್ ಸಿನಿಮಾ, ಐಸಾಕ್ಸ್ ಪಡುಬಿದ್ರೆಯಲ್ಲಿ ಭಾರತ್ ಸಿನಿಮಾ, ಸುರತ್ಕಲ್ ನಲ್ಲಿ ನಟರಾಜ್ ಸಿನಿ ಗ್ಯಾಲಕ್ಷ್ಮಿ ಪುತ್ತೂರಿನಲ್ಲಿ ಭಾರತ್ ಸಿನಿಮಾ ಮೂಡಲಿದೆ ಯಲ್ಲಿ ಅಮರ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಸುಳ್ಯದಲ್ಲಿ ಸಂತೋಷ್, ಬೆಳ್ತಂಗಡಿಯಲ್ಲಿ ಭಾರತ್ ಸಿನಿಮಾ ಮೊದಲಾದ ಕಡೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ತಿಳಿಸಿದರು.
ಪಿರ್ಕಿಲು ಸಿನಿಮಾಕ್ಕೆ 3 ಹಂತದಲ್ಲಿ ಸುಳ್ಯ, ಪುತ್ತೂರು, ಮಂಗಳೂರು, ಉಪ್ಪಿನಂಗಡಿಯಲ್ಲಿ 29 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಸಿನಿಮಾಕ್ಕೆ U/A ಸರ್ಟಿಫಿಕೇಟ್ ದೊರತಿದೆ. ಪಿರ್ಕಿಲು ಸಿನಿಮಾ ಹಾಸ್ಯ ಮತ್ತು ಕೌಟುಂಬಿಕ ಮನರಂಜನೆಯ ಚಿತ್ರ ಎಲ್ಲಾ ವರ್ಗದ ಜನರು ಇಷ್ಟ ಪಡುವ ಕತೆಯನ್ನು ಹಾಸಭರಿತವಾಗಿ ನಿರ್ದೇಶಕರು ಹೆಣೆದಿದ್ದಾರೆ, ನಿರ್ದೇಶಕ ಹೆಚ್.ಡಿ ಆರ್ಯ ಕಥೆ. ಚಿತ್ರದ ಸಂಭಾಷಣೆ ಬರೆದಿದ್ದಾರೆ. ಬಬಿತ ತುಳು ಸಂಭಾಷಣೆ ತರ್ಜಿಮೆಯನ್ನು ಮಾಡಿದ್ದಾರೆ ಎಂದು ತಿಳಿಸಿದರು.
ತಾರಾ ಬಳಗದಲ್ಲಿ ಖ್ಯಾತ ನಾಮರಾದ ತುಳುನಾಡ ಮಾಣಿಕ್ಯ ಅರವಿಂದ ಬೊಳಾರ್, ನವರಸ ರಾಜ ಭೋಜರಾಜ ವಾಮಂಜೂರು, ಕಾಮಿಡಿ ಹಿಟ್ಲರ್ ದೀಪಕ್ ರೈ ಪಾಣಾಜೆ, ರವಿ ರಾಮಕುಂಜ ಪ್ರಮುಖ ಪಾತ್ರದಲ್ಲಿದ್ದಾರೆ. ನಾಯಕ ನಟರಾಗಿ ವರ್ಧನ್ ಮತ್ತು ಸುದೇಶ್, ನಾಯಕಿಯಾಗಿ ಸಲೋಮಿ ಡಿ’ಸೋಜ, ಲತಾ ಅಭಿನಯಿಸಿದ್ದಾರೆ. ಇನ್ನುಳಿದಂತೆ ಸುಮಿತ್ರ ರೈ, ಅಮಿತ, ನವೀನ್ ಬೊಂದೇಲ್, ಅರ್ಪಣ್, ಅನಿಲ್ ರೈ, ರಂಜಿತ್ ರೈ, ತಿಮ್ಮಪ್ಪ ಕುಲಾಲ್, ಪ್ರಭಾಕರ ಶೆಟ್ಟಿ, ಮೋಹನ್ ಸೊನಿ ಮೊದಲಾದವರಿದ್ದಾರೆ ಎಂದು ಹೇಳಿದರು.
ತಂತ್ರಜ್ಞ ತಂಡದಲ್ಲಿ ವಸ್ತ್ರಾಲಂಕಾರ ಲತಾ, ನಿರ್ದೇಶನ ತಂಡದಲ್ಲಿ-ದೀಘ್ರ ಆರಾಧ್ಯ, ಛಾಯಾಗ್ರಹಣ ಸಹಾಯ – ಕೀರ್ತಿ, ಮೇಕಪ್ ದಿಶಾ, ದಿಲೀಪ್, ಸಂಕಲನ ಎ.ಆರ್. ಕೃಷ್ಣ, ಅಭಿಷೇಕ್ ರಾವ್, ಸಂಗೀತ ವಿ.ಮನೋಹರ, ಸಾಹಿತ್ಯದಲ್ಲಿ ವಿ.ಮನೋಹರ್, ಶ್ರೀಧರ್ ಕರ್ಕೇರ, ಛಾಯಾಗ್ರಹಣ ಎ.ಆರ್.ಕೃಷ್ಣ, ನಿರ್ಮಾಪಕರು ಸತೀಶ್ ಪೆರ್ನೆ, ಶಿವಪ್ರಸಾದ್ ಇಜ್ಜಾವು, ಸಹಕರಿಸಿರುತ್ತಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಪ್ರಸಾದ್ ಇಜ್ಜಾವು, ಲತಾ ಎಸ್.ಗೌಡ, ಸುದೇಶ್ ರೈ, ಅನಿಲ್ ರೈ ಉಪಸ್ಥಿತರಿದ್ದರು.