ಕಡಬ: ಕಡಬ ವಿದ್ಯಾನಗರದ ಕೋಟೆಂಬರ ಕೊಚ್ಚಿಯಲ್ಲಿನ ಶ್ರೀ ಕೊರತ್ತಿ, ಪಂಜುರ್ಲಿ, ಗುಳಿಗ ದೈವಗಳಿಗೆ ತಂಬಿಲ ಹಾಗೂ ಅಗೇಲು ಸೇವೆ ಮಂಗಳವಾರ ನಡೆಯಿತು.
ಬೆಳಿಗ್ಗೆ ದೈವಜ್ಞ ಪ್ರಸಾದ್ ಕೆದಿಲಾಯ ಅವರ ನೇತೃತ್ವದಲ್ಲಿ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಪ್ರಧಾನ ಪರಿಚಾರಕ ಶ್ರೀಧರ ನಾಯ್ಕ್ ಕುಂಡಿಲು ಅವರ ನೇತೃತ್ವದಲ್ಲಿ ದೈವಗಳಿಗೆ ಅಗೇಲು ಹಾಕಿ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೈವಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಗೌರವಾಧ್ಯಕ್ಷ ವೆಂಕಟ್ರಮಣ ರಾವ್ ಮಂಕುಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ, ಕೋಶಾಧಿಕಾರಿ ಗಣೇಶ್ ನಾಯ್ಕ್ ಕುಂಡಿಲು, ಕಡಬ ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಕೀರ ಮೂಲ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಶಿಕ್ಷಕ ಮಾಯಿಲಪ್ಪ ಜಿ, ಪ್ರಮುಖರಾದ ಸುದರ್ಶನ ಗೌಡ ಕೋಡಿಂಬಾಳ, ಬಾಬು ರೈ ಪಾಜೋವು, ಅಶೋಕ್ ಕುಮಾರ್ ಪಿ, ಸುರೇಶ್ ದೇಂತಾರು, ಶಿವಪ್ರಸಾದ್ ಮೈಲೇರಿ, ಸೀತಾರಾಮ ಗೌಡ ವಿದ್ಯಾನಗರ, ಕೇಶವ ಬೇರಿಕೆ, ವೆಂಕಟ್ರಮಣ ಕುತ್ಯಾಡಿ, ಬಾಲಕೃಷ್ಣ ಗೌಡ ಡಿ.ಕೆ, ಮೋಹನ ಗೌಡ ಕೋಡಿಂಬಾಳ ಮತ್ತಿತರರು ಉಪಸ್ಥಿತರಿದ್ದರು.