ಪುತ್ತೂರು: ಮಂಗಳೂರಿನ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಅಂತರ್ ಸ್ಪರ್ಧೆಯಲ್ಲಿ ಅಕ್ಷಯ ಎಜ್ಯುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ನಡಿ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ವಿವಿಧ ಬಹುಮಾನಗಳನ್ನು ಪಡೆದಿದೆ.

ಎಕೆಲಾನ್ 23 ರಾಷ್ಟ್ರಮಟ್ಟದ ಸ್ಪರ್ಧೆ ಮೆಹಂದಿಯಲ್ಲಿ ಪ್ರಥಮ, ದೇಹದಾರ್ಢ್ಯ ಪ್ರಥಮ, ಮೈಮ್ ಶೋ ಪ್ರಥಮ ಹಾಗೂ ಫ್ಯಾಶನ್ ಶೋದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದ ಎಕ್ಸೆಲೋ 2ಕೆ23 ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸ್ಟ್ಯಾಂಡ್ ಆಪ್ ಕಾಮಿಡಿಯಲ್ಲಿ ಪ್ರಥಮ, ಆರ್ಟ್ ಔಟ್ ಆಫ್ ಪೇಸ್ಟ್ ನಲ್ಲಿ ಪ್ರಥಮ ಸ್ಥಾನ ಪಡೆದಿದೆ.

ಮಂಗಳೂರಿನ ಪುರಭವನದಲ್ಲಿ ನಡೆದ ಲಯನ್ಸ್ ಕನ್ನಡ ಕಲರವ ಅಂ ತರ್ ಕಾಲೇಜು ಸಾಂಸ್ಕೃತಿಕ ವೈವಿಧ್ಯ ಸ್ಪರ್ಧೆಯಲ್ಲಿ ದ್ವಿತೀಯ ರನ್ನರ್ ಆಫ್ ಪ್ರಶಸ್ತಿಯೊಂದಿಗೆ 10 ಸಾವಿರ ನಗದು ಪುರಸ್ಕಾರವನ್ನು ತನ್ನದಾಗಿಸಿಕೊಂಡಿದೆ ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.