ಮೇ 24 ರಿಂದ 26 : ಕುರಿಯ ನೆಕ್ಕಿಲ್ ಬೈಲಾಡಿ ಶ್ರೀ ರಾಜಾ ಗುಳಿಗ ದೈವದ ಪ್ರತಿಷ್ಠಾ ಮಹೋತ್ಸವ

ಪುತ್ತೂರು: ಕುರಿಯ ಗ್ರಾಮದ ನೆಕ್ಕಿಲ್ ಬೈಲಾಡಿ ಶ್ರೀ ರಾಜಾ ಗುಳಿಗ ದೈವದ ಸಾನಿಧ್ಯದಲ್ಲಿ ಶ್ರೀ ರಾಜಾ ಗುಳಿಗ ದೈವದ ಪ್ರತಿಷ್ಠಾ ಕಲಶ ಮೇ 24 ರಿಂದ 26 ರ ತನಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಮೇ 24 ಬುಧವಾರ ಬೆಳಿಗ್ಗೆ 6 ಗಂಟೆಗೆ ಸ್ಥಳ ಶುದ್ಧಿ, ಗಣಪತಿ ಹೋಮ, ರಾತ್ರಿ 7 ರಿಂದ ಗುಳಿಗ ದೈವದ ಕೋಲ ಹಾಗೂ ದೈವದ ಪ್ರತಿಷ್ಠೆ, ರಾತ್ರಿ 9 ರಿಂದ ಅನ್ನಸಂತರ್ಪಣೆ ಜರಗಲಿದೆ.

ಮೇ 25 ಗುರುವಾರ ಸಂಜೆ 6 ರಿಂದ ದೇವತಾ ಪ್ರಾರ್ಥನೆ, ಪಂಚಗವ್ಯ, ಪುಣ್ಯಾಹವಾಚನ, ಸುದರ್ಶನ ಹೋಮ, ಬಾಧೋಚ್ಛಟನೆ, ಪ್ರೇತ ವಾಹನ, ರಾತ್ರಿ ಗಂಟೆ 9 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.































 
 

ಮೇ 26 ಶುಕ್ರವಾರ ಬೆಳಿಗ್ಗೆ 6 ರಿಂದ ಪುಣ್ಯಾಹ ವಾಚನ, ತಿಲಹೋಮ, ದುರ್ಮರಣ ಶಾಂತಿ, ಪವಮಾನ ಹೋಮ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top