ಪುತ್ತೂರು: ಹಲ್ಲೆ ನಡೆಸಲು ಕಾಂಗ್ರೆಸ್ ಒತ್ತಡ ಹಾಕಿಯೇ ಇಲ್ಲ. ಆ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ ಅವರು ಬೆಂಗಳೂರಿಗೆ ತೆರಳಿದ್ದರು. ನಾನಾಗಿ ಆ ವಿಷಯಕ್ಕೆ ಹೋಗಿಲ್ಲ. ಹೀಗಿರುವಾಗ ಒತ್ತಡ ಹಾಕುವುದಾದರೂ ಯಾರು?
ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಯುವಕರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಬಳಿಕ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿದರು. (ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿರುವ ವೀಡಿಯೋ ಇಲ್ಲಿ ನೋಡಿ.)
ಪೊಲೀಸ್ ದೌರ್ಜನ್ಯ ನಡೆದ ಬಳಿಕ ಪೊಲೀಸರ ಜೊತೆ ಮಾತನಾಡಿದ್ದೆ. ಆ ಸಂದರ್ಭ ಬ್ಯಾನರ್ ಹಾಕಿ ಅದಕ್ಕೆ ಚಪ್ಪಲಿ ಹಾರ ಹಾಕಿದವರನ್ನು ರೌಡಿಗಳು ಎಂದ್ರು. ರೌಡಿಸಂ ಮಾಡಿದ್ರೆ ಹೊಡೆಯುವುದು ಹೌದು. ಆದರೆ ಚಪ್ಪಲಿ ಹಾರ ಹಾಕಿದ್ದಾರೆ ಎಂದು ಈ ರೀತಿ ಹೊಡೆಯುವುದು ನಾಚಿಕೆಗೇಡು ಎಂದು ಪ್ರತಿಕ್ರಿಯಿಸಿದೆ. ಹಾಗೆಂದು, ಚಪ್ಪಲಿ ಹಾರ ಹಾಕಿದ ಕೂಡಲೇ ಒಬ್ಬ ವ್ಯಕ್ತಿಯ ಗೌರವ ಕೆಳಕ್ಕೆ ಹೋಗುವುದಿಲ್ಲ. ಹೂವಿನ ಹಾರ ಹಾಕಿದ ಕೂಡಲೇ ಆತನ ಗೌರವ ಮೇಲೆಯೂ ಹೋಗುವುದಿಲ್ಲ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು ಎಂದರು.