ಪುತ್ತೂರು: ಇಲ್ಲಿನ ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರ ಆರೋಗ್ಯ ವಿಚಾರಿಸಿದ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಯುವಕರಿಗೆ ಧೈರ್ಯ ತುಂಬಿದರು.

ಪಂಚವಟಿ, ಬಿಜೆಪಿ ಕಚೇರಿಗೆ ತೆರಳಿ ಬಳಿಕ ಮಹಾವೀರ ಆಸ್ಪತ್ರೆಗೆ ಭೇಟಿ ನೀಡಿದರು.
ಆಸ್ಪತ್ರೆ ಆವರಣದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಯತ್ನಾಳ್ ಅವರನ್ನು ಸ್ವಾಗತಿಸಿದರು.