ಕಡಬ: ಕುಲ್ಕುಂದ ನಿವಾಸಿಯೊಬ್ಬರು ಕಡಬದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಕಾಲೊನಿ ನಿವಾಸಿ ನರಸಿಂಹ (60) ಮೃತಪಟ್ಟವರಾಗಿದ್ದಾರೆ.
ಮೃತರು ಸುಬ್ರಹ್ಮಣ್ಯ ಐನೆಕಿದು ಸೊಸೈಟಿಯಲ್ಲಿ ಗುಮಾಸ್ತರಾಗಿ ಕೆಲಸದಲ್ಲಿದ್ದವರು ಪ್ರಸ್ತುತ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿದ್ದರು. 15 ವರ್ಷದ ಹಿಂದೆ ಇವರು ಪಾರ್ಶ್ವವಾಯು ಪೀಡಿತರಾಗಿದ್ದರು. ಅಲ್ಲದೇ ಮೂರ್ಛೆರೋಗದ ಬಗ್ಗೆ ಮಾತ್ರೆಯನ್ನು ಸೇವಿಸುತ್ತಿದ್ದರು. ಇದರ ಜೊತೆಗೆ ಕುಡಿತದ ಚಟವನ್ನು ಹೊಂದಿದ್ದರು. ಅವರು ಬುಧವಾರ ಕಡಬ ಪೇಟೆಯ ಹಳೇ ಪ್ರವಾಸಿ ಮಂದಿರದ ಕಟ್ಟಡದ ಬಳಿ ಬಿದ್ದುಕೊಂಡಿರುವುದನ್ನು ಪಕ್ಕದ ಬಾರ್ ಮ್ಯಾನೇಜರ್ ಸುಧಾಕರ ರೈ ಹಾಗೂ ಸಾರ್ವಜನಿಕರು ನೋಡಿದ ವೇಳೆ ಅವರು ಮೃತಪಟ್ಟಿರುವುದು ತಿಳಿದು ಬಂದಿದೆ. ನರಸಿಂಹ ಅವರ ಪತ್ನಿ ಲಲಿತಾ ಅವರು ಮಕ್ಕಳೊಂದಿಗೆ ಭೂತ ಹರಕೆಯ ಬಗ್ಗೆ ಬಂಟ್ವಾಳಕ್ಕೆ ಹೋಗಿದ್ದು ಅಲ್ಲಿರುವ ಸಮಯ ಪತಿ ಕಡಬದಲ್ಲಿ ಮೃತಪಟ್ಟಿರುವ ಬಗ್ಗೆ ವಾಟ್ಸಾಪ್ ಗ್ರೂಪ್ನಲ್ಲಿ ಬಂದಿರುವುದನ್ನು ನೋಡಿ ಕಡಬಕ್ಕೆ ಬಂದು ಗಂಡನ ಮೃತ ಶರೀರವನ್ನು ಗುರುತಿಸಿದ್ದರು.. ಈ ಬಗ್ಗೆ ಲಲಿತಾ ಅವರು ನೀಡಿದ ದೂರಿನಂತೆ ಕಡಬ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ