ಪುತ್ತೂರು: ತಂದೆ –ಮಗನ ಹೊಡೆದಾಟದಲ್ಲಿ ಗಾಯಗೊಂಡು ತಂದೆ ಮೃತಪಟ್ಟ ಘಟನೆ ಕುಕ್ಕುಜಡ್ಕದಲ್ಲಿ ನಡೆದಿದೆ.
ಕಿಟ್ಟು ಹಾಗೂ ಮಗ ಹರ್ಷಿತ್ ಹೊಡೆದಾಡಿಕೊಂಡಿದ್ದು, ಗಂಭೀರ ಗಾಯಗೊಂಡ ತಂದೆ ಕಿಟ್ಟು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಹಳೆಯ ದ್ವೇಷದಿಂದ ಕಿಟ್ಟು ಅವರ ಎರಡನೇ ಹೆಂಡತಿ ಮಗ ಹರ್ಷಿತ್ ಅಡಿಕೆ ಮರದ ಸಲಾಕೆಯಿಂದ ತಂದೆಗೆ ಹೊಡೆದಿದ್ದ. ಗಾಯಗೊಂಡ ಕಿಟ್ಟು ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ನಿತ್ಯಾನಂದ ಎಂಬವರು ದೂರು ನೀಡಿದ್ದು, ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.