ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚರಂಡಿ ದುರಸ್ತಿಗೆ ಕಾಲ ಕೂಡಿಬಂದಿಲ್ಲ.

ಕಡಬ: ಮಳೆಗಾಲ ಆರಂಭವಾಗುವ ಸೂಚನೆ ಇದ್ದರೂ  ಕಡಬ  ಪಟ್ಟಣ ಪಂಚಾಯಿತಿ ವ್ಯಾಪ್ತಿಯ  ಪೇಟೆ ಹಾಗೂ ಪರಿಸರದಲ್ಲಿ  ಕೆಲವು ಕಡೆ ರಸ್ತೆಯ ಬದಿಯಲ್ಲಿನ ಚರಂಡಿಯ ದುರಸ್ತಿ, ಗಿಡಗಂಟಿಗಳ ತೆರವಿಗೆ ಇನ್ನೂ ಕಾಳ ಕೂಡಿಬಂದಿಲ್ಲ.

ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಮಳೆನೀರು ರಸ್ತೆಯಲ್ಲಿಯೇ ಹರಿದುಹೋಗುತ್ತಿದ್ದರೆ, ಪೇಟೆಯ ಚರಂಡಿಗಳಲ್ಲಿ ಸಂಗ್ರಹವಾದ ಮಳೆನೀರು ತೋಡುಗಳಿಗೆ ಹರಿದುಹೋಗುವ ದಾರಿಗಳಲ್ಲಿ  ಪೊದೆ, ಗಿಡಗಂಟಿಗಳು ಬೆಳೆದು ಕಸಕಡ್ಡಿಗಳು ಸೇರಿಕೊಂಡು ನೀರಿನ ಹರಿವಿಗೆ ತಡೆಯಾಗುತ್ತಿವೆ. ಮಳೆಗಾಲ ಆರಂಭವಾಗುವ ಮೊದಲೇ ನೀರು ಹರಿದುಹೋಗುವ ಮಾರ್ಗಗಳಲ್ಲಿನ ತೊಡಕುಗಳನ್ನು ನಿವಾರಿಸಿದರೆ ಅಲ್ಲಲ್ಲಿ ಉಂಟಾಗುವ ಕೃತಕ ನೆರೆಯನ್ನು ತಪ್ಪಿಸಬಹುದು ಎಂದು ನಾಗರೀಕರು ಅಭಿಪ್ರಾಯಪಟ್ಟಿದ್ದಾರೆ.

ಕಡಬ ತಾಲೂಕು ಕೇಂದ್ರವಾಗಿ, ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮ,ಆರ್ಪಾಡಾದ ಬಳಿಕ ಪೇಟೆ ದಿದನದಿಂದ ದಿನಕ್ಕೆ ಬೆಳೆಯುತತಿದ್ದು. ಇಲ್ಲಿನ ಒಳಚರಂಡಿ ವ್ಯವಸ್ಥೆ ಸುಧಾರಿಸಬೇಕಾಗಿದೆ. ಪೇಟೆಯಲ್ಲಿನ  ಚರಂಡಿಗಳಿಂದ ಹರಿಯುವ ಮಳೆನೀರು ಬೈಲಿನ ಭಾಗಕ್ಕೆ  ಹೋಗುವ ಸಣ್ಣ ತೋಡುಗಳಲ್ಲಿ ಹೂಳು ಹಾಗೂ ಕಸಕಡ್ಡಿಗಳನ್ನು ತೆರವುಗೊಳಿಸಿದರೆ ಸಧ್ಯಕ್ಕೆ ಸಮಸ್ಯೆ ಪರಿಹಾರವಾಗಬಹುದು ಎನ್ನುವುದು ಸಾರ್ವಜನಿಕರ ಅಭಿಮತವಾಗಿದೆ. 































 
 

ಕಡಬ ಪೇಟೆಗೆ ಹೊಂದಿಕೊಂಡಿರುವ  ಅಂಗಡಿ ಮನೆ ಕಾಲನಿ ಬಳಿಯ ದ್ರವತ್ಯಾಜ್ಯ ಸಂಸ್ಕರಣ ಘಟಕದ ಪಕ್ಕದಿಂದ  ಬೈಲಿನ ಕಡೆಗೆ ಮಳೆನೀರು ಹರಿದುಹೋಗುವ ಸಣ್ಣ ತೋಡಿನಲ್ಲಿ  ಪ್ಲಾಸ್ಟಿಕ್ ತ್ಯಾಜ್ಯಗಳು, ಗಿಡಗಂಟಿಗಳು ಹಾಗೂ ಹೂಳು ತುಂಬಿಕೊಂಡಿದೆ. ಕಾಲನಿಯಿಂದ ಹರಿದುಬರುವ ಕೊಳಚೆನೀರು ಕೂಡ ಅಲ್ಲಲ್ಲಿಯೇ ಶೇಖರಣೆಯಾಗಿ ದುರ್ವಾಸನೆಯೊಂದಿಗೆ ರೋಗ ಹರಡುವ ಭೀತಿ ಎದುರಾಗಿದೆ. ಇನ್ನು  ಕಡಬ ಪೇಟೆಯ ಸಂತೆಕಟ್ಟೆಯ ಪರಿಸರದ ಚರಂಡಿಗಳ ನೀರು ಹರಿದು ತೋಡು ಸೇರುವಲ್ಲಿ  ಕೂಡ ಪೂರ್ತಿ ಗಿಡಗಂಟಿಗಳು ಬೆಳೆದು ನೀರಿನ ಹರಿವಿಗೆ ತಡೆಯುಂಟಾಗಿದೆ. ಮಳೆಗಾಲಕ್ಕೆ  ಮುನ್ನ ಈ ಎಲ್ಲಾ ತಡೆಗಳನ್ನು  ತೆರವುಗೊಳಿಸಬೇಕಾಗಿದೆ. ಪೇಟೆಯಲ್ಲಿ ಕೆಲವು ಕಡೆ ಚರಂಡಿಯಲ್ಲಿಯೇ ಕುಡಿಯುವ ನೀರಿನ ಪೈಪ್‌ಗಳು ಹಾದುಹೋಗಿರುವುದರಿಂದ ಅದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಹಾಗೂ ಕಸಕಡ್ಡಿ ಸಿಲುಕಿಕೊಂಡು ನೀರು ಹರಿದುಹೋಗಲು ತೊಡಕಾಗುತತಿದೆ.  ಕಡಬ ಪೇಟೆಯ ಅಡ್ಡಗದ್ದೆ ಕಾಲೇಜು ರಸ್ತೆ, ಪಂಜ ರಸ್ತೆಯಲ್ಲಿಯೂ ಮಳೆನೀರು ಹರಿದುಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ  ಇಲ್ಲದೇ ಇರುವುದರಿಂದ ಮಳೆನೀರು ರಸ್ತೆಯಲ್ಲಿಯೇ ಹರಿದು ಕೃತಕ ನೆರೆ ಉಂಟಾಗುತ್ತಿದೆ. ಇದನ್ನೆಲ್ಲಾ ನಿವಾರಣೆ ಮಾಡಲು ಪಟ್ಟಣ ಪಂಚಾಯಿತಿ ಸೂಕ್ತ ಕ್ರಮ ಜರಗಿಸಬೇಕು ಎಂದು ನಾಗರೀಕರು ಅಗ್ರಹಿಸಿದ್ದಾರೆ.

ಜೂನ್ ತಿಂಗಳ ಆರಂಭದಲ್ಲಿ ಚರಂಡಿಗಳ ಹೂಳೆತ್ತುವ ಕೆಲಸ

ಪಟ್ಟಣ ಪಂಚಾಯಿತಿ ವ್ಯಾಪ್ತಿಯ  ಪೇಟೆ ಸೇರಿದಂತೆ ಹಲವೆಡೆ ಚರಂಡಿಗಳ ದುರಸ್ತಿಗಾಗಿ 4.5 ಲಕ್ಷ ರೂ. ಅನುದಾನ ಕಾದಿರಿಸಲಾಗಿದೆ. ಚುನಾವಣೆಯ ಕಾರಣದಿಂದಾಗಿ ಟೆಂಡರ್ ಕರೆದು ಕಾಮಗಾರಿ ನಿರ್ವಹಿಸಲು ಸಾಧ್ಯವಾಗಲಿಲ್ಲ. ಈಗ ಚುನಾವಣೆ ಮುಗಿದಿದೆ ಬರುವ ವಾರ ಟೆಂಡರ್ ಕರೆದು ಜೂನ್ ತಿಂಗಳ ಆರಂಭಕ್ಕೆ ಮುನ್ನ ಚರಂಡಿಗಳಲ್ಲಿನ ತ್ಯಾಜ್ಯ, ಗಿಡಗಂಟಿ ತೆರವು ಹಾಗೂ ಹೂಳೆತ್ತುವ ಕೆಲಸಗಳನ್ನು ಮಾಡಿ ಕೊಳಚೆ ಹಾಗೂ ಮಳೆ ನೀರು ನಿಲ್ಲದಂತೆ ಮಾಡಲಾಗುವುದು.

  • ಪಕೀರ ಮೂಲ್ಯ, ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ ಕಡಬ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top