ಪುತ್ತೂರು: ಅವಹೇಳನ ಮಾಡಿ ಬ್ಯಾನರ್ ಹಾಕಿದ ಪ್ರಕರಣದ ಆರೋಪಿಗಳಿಗೆ ಪೊಲೀಸರಿಂದ ಹಲ್ಲೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ASP ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ. ಮುಂದಿನ ತನಿಖೆಗೆ DYSP ಅವರಿಗೆ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ವಿಕ್ರಂ ಅಮಟೆ ಹೇಳಿದರು.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದು ಅಭಿ / ಅವಿನಾಶ್ ದೂರು ನೀಡಿದ್ದು, ಎಫ್.ಐ.ಆರ್. ದಾಖಲಾಗುತ್ತಿದೆ. ಮುಂದಿನ ತನಿಖೆಗೆ ಡಿ.ವೈ.ಎಸ್.ಪಿ.ಗೆ ನೀಡಲಾಗುವುದು. ಹಲ್ಲೆ ನಡೆಸಿದ ಬಗ್ಗೆ 3 ಪೊಲೀಸರ ವಿರುದ್ಧ ದೂರು ನೀಡಲಾಗಿದೆ. ತನಿಖೆಯಲ್ಲಿ ಇದು ರುಜುವಾತಾದರೆ ಸಿಬ್ಬಂದಿಗಳ ಮೇಲೆ ಇಲಾಖಾ ಕ್ರಮ ಜರಗುತ್ತದೆ ಎಂದರು.
ಅವಹೇಳನಕಾರಿಯಾಗಿ ಬ್ಯಾನರ್ ಹಾಕಿದ ಪ್ರಕರಣದಲ್ಲಿ ಒಟ್ಟು 9 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆ ಸಂದರ್ಭ ಪೊಲೀಸರಿಂದ ಹಲ್ಲೆ ನಡೆದಿದೆ ಎಂದು ದೂರಲಾಗಿದೆ ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಕೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ ಎಂದರು.