ಇಂದಿನಿಂದ ನೆಹರುನಗರ ವಿವೇಕಾನಂದ ಕಾಲೇಜು ರಸ್ತೆ ಮೇಲ್ಸೇತುವೆ ಕಾಮಗಾರಿ ಹಿನ್ನಲೆ : ಬದಲಿ ರಸ್ತೆಯಲ್ಲಿ ಸಂಚಾರ

ಪುತ್ತೂರು: ನೆಹರೂನಗರದ ವಿವೇಕಾನಂದ ಕಾಲೇಜು ರಸ್ತೆಯಲ್ಲಿರುವ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ರೈಲ್ವೇ ಇಲಾಖೆಯಿಂದ ನಡೆಸುವ ಹಿನ್ನಲೆಯಲ್ಲಿ ಮೇ 18 ರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಈಗಾಗಲೇ ಬದಲಿ ರಸ್ತೆಯಲ್ಲಿ ವಾಹನ ಸಂಚಾರ ನಡೆಸಬೇಕಾಗಿದ್ದು, ಬದಲಿ ರಸ್ತೆಯ ವ್ಯವಸ್ಥೆ ಮಾಡಲಾಗಿದೆ.

ಪುತ್ತೂರು-ಮಂಗಳೂರು ಹೆದ್ದಾರಿಯಿಂದ ವಿವೇಕಾನಂದ ಕಾಲೇಜು ಸಂಪರ್ಕಿಸಲು ಬದಲಿ ರಸ್ತೆಯಾಗಿ ಮುರದಿಂದ ಕೆದಿಲಕ್ಕೆ ಹೋಗುವ ರಸ್ತೆಯಲ್ಲಿ ಸಂಚರಿಸಿ ಶಾಂತಿನಗರ, ಅಜೇಯನಗರ ಮೂಲಕ ಕಾಲೇಜು ಕಡೆಗೆ ಹೋಗುವ ರಸ್ತೆಯನ್ನು ಹಾಗೂ ಬನ್ನೂರು ಮಾರ್ಗವಾಗಿ ಪಡೀಲ್ ಕಡೆಗೆ ಸಂಪರ್ಕಿಸಬೇಕಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top