ಪುತ್ತೂರು: ಮಲೇರಿಯಾ, ಡೆಂಗ್ಯೂ ಡೇ ಹಾಗೂ ತಾಲೂಕಿನ ಆಶಾ ಕಾರ್ಯಕರ್ತರಿಗೆ ಟಾರ್ಚ್ ಲೈಟ್ ವಿತರಣೆ ಸಮಾರಂಭ ಮೇ 19ರಂದು ಮಧ್ಯಾಹ್ನ 2.30ಕ್ಕೆ ಪುತ್ತೂರು ತಾಲೂಕು ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ನಡೆಯಲಿದೆ.
ಮುತ್ತೂಟ್ ಫೈನಾನ್ಸ್, ಕಶ್ವಿ ಹಸಿರು ದಿಬ್ಬಣ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಕಾರ್ಯಕ್ರಮ ಆಯೋಜಿಸಿದೆ.
ಎಸ್.ಆರ್.ಕೆ. ಲ್ಯಾಡರ್ಸಿನ ಕೇಶವ್ ಅಮೈ ಕಾರ್ಯಕ್ರಮ ಉದ್ಘಾಟಿಸುವರು. ಡಿ.ಸಿ.ಆರ್.ಆರ್. ರತ್ನಾಕರ್ ರೈ, ಮಂಗಳೂರು ಮುತ್ತೂಟ್ ಫೈನಾನ್ಸ್ ರೀಜನಿನ ರೀಜನಲ್ ಮ್ಯಾನೇಜರ್ ಉದಯ್ ಶ್ಯಾಮ್ ಖಂಡಿಗೆ, ಮುತ್ತೂಟ್ ಫೈನಾನ್ಸ್ ಪುತ್ತೂರಿನ ಕ್ಲಸ್ಟರ್ ಮ್ಯಾನೇಜರ್ ಸಂದೇಶ ಶೆಣೈ, ಜಿಲ್ಲಾ ವೆಕ್ಟರ್ ಬಾರ್ನ್ ಡಿಸೀಸ್ ಕಂಟ್ರೋಲ್ ಆಫೀಸರ್ ಡಾ. ನವೀನ್ ಚಂದ್ರ ಕುಲಾಲ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸಭಾಪತಿ ಶ್ರೀಧರ್ ಕೆ., ಮುತ್ತೂಟ್ ಫೈನಾನ್ಸಿನ ಪುತ್ತೂರು ಬ್ರಾಂಚ್ ಮ್ಯಾನೇಜರ್ ನವೀನ ಎ., ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ, ಕಾರ್ಯದರ್ಶಿ ಮಹೇಶ್ಚಂದ್ರ, ಮುತ್ತೂಟ್ ಫೈನಾನ್ಸ್ ಮಂಗಳೂರು ರೀಜನಿನ ಮ್ಯಾನೇಜರ್ ಪ್ರಸಾದ್ ಕುಮಾರ್, ಕಶ್ವಿ ಹಸಿರು ದಿಬ್ಬಣದ ಕೇಶವ ರಾಮಕುಂಜ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.