ಪುತ್ತೂರು: ಬ್ಯಾನರ್ ವಿಷಯದಲ್ಲಿ ಬಿಜೆಪಿಯವರು ಪ್ರತಿಭಟನೆ ಎಂಬ ನಾಟಕದ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ.ವಿಶ್ವನಾಥ ರೈ ಆರೋಪಿಸಿದ್ದಾರೆ.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಿಂದ ಬಿಜೆಪಿ ವಿಲವಿಲ ಒದ್ದಾಡುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಬಿಜೆಪಿ ನಾಯಕರು ಹತಾಶರಾಗಿ ಏನೇನೋ ಹೇಳಲು ಹೊರಟಿದ್ದಾರೆ.ಯಾರಿಗೂ ಚಪ್ಪಲಿ ಹಾಕುವ ದುಸ್ಥಿತಿ ನಮಗೆ ಬಂದಿಲ್ಲ ಎಂದರು. ಆದರೂ ಚಪ್ಪಲಿ ಹಾಕಿರುವ ಸಂಗತಿ ಖಂಡನೀಯ ಎಂದ ಅವರು, ಕಾಂಗ್ರೆಸ್ ಸರಕಾರ ಬಂದ ಮೇಲೆ ಮಾರಣ ಹೋಮ ಎಂದಿರುವುದು ಬಿಜೆಪಿ ಸೋಲಿಗೆ ಕಾರಣರಾದವರ ಮಾರಣ ಹೋಮ ಆಗಲಿದೆ. ಹಿಂದುಗಳ ಮಾರಣ ಹೋಮ ಅಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ಮಾತನಾಡಿ, ಪುತ್ತೂರು ಮಾಜಿ ಶಾಸಕರು ಇಂದು ಅಧಿಕಾರ ಬಿಟ್ಟು ಹೊರಗೆ ಬಂದಿದ್ದು, ನೀರಿನಿಂದ ಹೊರ ಬಂದ ಮೀನಿನಂತಾಗಿದ್ದಾರೆ. ಬ್ಯಾನರ್ ಹಾಕಿದ ವಿಚಾರದಲ್ಲಿ ಅವರು ಹಿಂದು ಕಾರ್ಯಕರ್ತರಿಂದಗೆ ಧಿಕ್ಕಾರ ಕೂಗಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ವಿರೋಧ ಪಕ್ಷವಾಗಿ ಕೆಲಸ ಮಾಡಲಿ ಬದಲಾಗಿ ಟೀಕೆ ಮಾಡುವುದನ್ನು ಬಿಟ್ಟುಬಿಡಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಘಟಕೆ ಅಧ್ಯಕ್ಷ ಅಬ್ದುಲ್ ಶುಕೂರ್ ಹಾಜಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದಾಲಿ, ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್ ಉಪಸ್ಥಿತರಿದ್ದರು.