7ನೇ ರಾಜ್ಯ ವೇತನ ಆಯೋಗದ ಅವಧಿ ವಿಸ್ತರಣೆ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಪರಿಷ್ಕರಿಸಲು ಮತ್ತು ನೂತನ ವೇತನ ಶ್ರೇಣಿ ರಚಿಸುವ ಉದ್ದೇಶದಿಂದ ನಿವೃತ್ತ ಸಿ.ಎಸ್.ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ 7ನೇ ರಾಜ್ಯ ವೇತನ ಆಯೋಗದ ಅವಧಿ ವಿಸ್ತರಣೆ ಮಾಡಲಾಗಿದೆ.

ರಾಜ್ಯಪಾಲರ ಆದೇಶದಂತೆ ಮೇ 19ರಿಂದ 6 ತಿಂಗಳ ಕಾಲ ಆಯೋಗದ ಅವಧಿ ವಿಸ್ತರಣೆ ಮಾಡಿ, ಸರ್ಕಾರ ಆದೇಶ ಹೊರಡಿಸಿದೆ. 2022ರ ನ. 19ರಂದು ವೇತನ ಆಯೋಗ ರಚನೆಯಾಗಿತ್ತು. ಆಯೋಗದ ಶಿಫಾರಸ್ಸು ಆಧರಿಸಲು ಮುಂದಿನ ಕ್ರಮ ಕೈಗೊಳ್ಳಲು 2023-24ನೇ ಸಾಲಿನಲ್ಲಿ ಹಣವನ್ನೂ ತೆಗೆದಿಡಲಾಗಿತ್ತು.

ಮಾರ್ಚ್​ ಒಳಗೆ ಮಧ್ಯಂತರ ವರದಿ ಪಡೆದು ಅವಲೋಕಿಸಿ 2023-24ರಲ್ಲಿಯೇ ಜಾರಿಗೊಳಿಸಲು ಸಿದ್ಧರಿದ್ದೇವೆ ಎಂದು ಈ ಹಿಂದೆ ನಿರ್ಗಮಿತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top