ಪುತ್ತೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ, ಪ್ರವೀಣ್ ಹೆತ್ತವರೊಂದಿಗೆ ಮಾತನಾಡಿದರು.
ಪ್ರವೀಣ್ ನೆಟ್ಟಾರು ಅವರ ಪುತ್ಥಳಿಗೆ ನಮಸ್ಕರಿಸಿ, ಪ್ರವೀಣ್ ನೆಟ್ಟಾರು ಅವರ ತಂದೆ – ತಾಯಿಯ ಆಶೀರ್ವಾದ ಪಡೆದರು.

ಇತ್ತೀಚೆಗೆ ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದು, ರಾಜ್ಯ – ದೇಶದ ಗಮನ ಸೆಳೆದಿತ್ತು. ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಹೊಸ ಮನೆಯನ್ನು ನಿರ್ಮಿಸಿಕೊಡಲಾಗಿತ್ತು.