ಪುತ್ತೂರು: ಇತ್ತೀಚೆಗೆ ನಡೆದ ಪದವಿ ಪೂರ್ವ ಪರೀಕ್ಷೆಯಲ್ಲಿ ನಿಂತಿಕಲ್ಲು ಕೆ.ಎಸ್. ಗೌಡ ಪಿಯು ಕಾಲೇಜು ಶೇ. 100 ಫಲಿತಾಂಶ ಪಡೆದುಕೊಂಡಿದೆ. ಕಾಲೇಜಿನಲ್ಲಿ ವಿಜ್ಞಾನಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರ ವಿಭಾಗಗಳಿದ್ದು, ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯಶಾಸ್ತ್ರ ವಿಭಾಗದ ರಿಫಾಷ್ ಶೇಖ್ ಐ.ಎಫ್. ಅವರು 584 (ಶೇ. 97.33) ಅಂಕ ಗಳಿಸಿ, ಕಾಲೇಜಿಗೆ ಪ್ರಥಮ ಹಾಗೂ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಂಪ್ಯೂಟರ್ ಸೈನ್ಸ್ 100, ಬ್ಯುಸಿನೆಸ್ ಸ್ಟಡೀಸ್ 100, ಅರ್ಥ ಶಾಸ್ತ್ರ 98, ಲೆಕ್ಕ ಶಾಸ್ತ್ರ 98, ಕನ್ನಡ 94, ಇಂಗ್ಲಿಷ್ 94 ಅಂಕ ಗಳಿಸಿದ್ದಾರೆ. ಇವರು ಕಲ್ಮಡ್ಕ ಇಂದ್ರಾಜೆ ಮಹಮ್ಮದ್ ಫಾರೂಕ್ – ಅಸ್ಮಾ ಭಾನು ದಂಪತಿ ಪುತ್ರಿ.

ವಾಣಿಜ್ಯ ವಿಭಾಗದ ಜೀವಿತಾ ಕೆ.ವಿ. 577 ಅಂಕ ಗಳಿಸಿದ್ದಾರೆ. ಇವರು ಐವತ್ತೊಕ್ಲು ಪಂಜ ಅಲ್ಪೆಕೋಡಿ ವಿಶ್ವನಾಥ ಕೆ. – ನಳಿನಿ ಕೆ. ದಂಪತಿ ಪುತ್ರಿ.

ವಾಣಿಜ್ಯ ವಿಭಾಗದ ಗಗನ್ ಕುಮಾರ್ ಕೆ.ಸಿ. 566 ಅಂಕ ಗಳಿಸಿದ್ದು, ಇವರು ಬಳ್ಪ ಕಾರ್ಜ ಚೇತನ್ ಕುಮಾರ್ – ಯಮುನಾ ದಂಪತಿ ಪುತ್ರ.

ವಾಣಿಜ್ಯ ವಿಭಾಗದ ಮೇಘ ಎಂ.ಬಿ. 566 ಅಂಕ ಗಳಿಸಿದ್ದಾರೆ. ಇವರು ಮುಪ್ಪೇರ್ಯ ಬಾಳಿಲ ದೇವಸ್ಯ ಬಾಲಕೃಷ್ಣ, ಜಯಕುಮಾರಿ ದಂಪತಿ ಪುತ್ರಿ.

ವಾಣಿಜ್ಯ ವಿಭಾಗದ ಅಬ್ದುಲ್ ರೆಹಮಾನ್ ಅಫೀಜ್ 564 ಅಂಕ ಗಳಿಸಿದ್ದಾರೆ. ಇವರು ನಿಂತಿಕಲ್ಲಿನ ಎಣ್ಮೂರು ಗುತ್ತಿಗೆ ಮನೆ ಇಬ್ರಾಹಿಂ ಜಿ., ಕೈರುನ್ನಿಸಾ ದಂಪತಿ ಪುತ್ರ.

ವಾಣಿಜ್ಯ ವಿಭಾಗದ ಆಕಾಶ್ ಎ..ಕೆ. 560 ಅಂಕ ಗಳಿಸಿದ್ದಾರೆ. ಇವರು ಪಂಬೆತ್ತಾಡಿ ಕೋಟಿಗುಡ್ಡೆ ಮನೆ ಆನಂದ ಪೂಜಾರಿ, ಕಸ್ತೂರಿ ಎ.ಕೆ. ದಂಪತಿ ಪುತ್ರ..

ವಾಣಿಜ್ಯ ವಿಭಾಗದ ಮೆಹರೂಪ್ ಬಿ. 559 ಅಂಕ ಗಳಿಸಿದ್ದಾರೆ. ಇವರು ಬೆಳ್ಳಾರೆ ಅಬ್ದುಲ್ ಕರೀಂ ಬಿ., ಮೈಮುನಾ ದಂಪತಿ ಪುತ್ರ.

ವಾಣಿಜ್ಯ ವಿಭಾಗದ ಯತೀಶ್ 540 ಅಂಕ ಗಳಿಸಿದ್ದಾರೆ. ಇವರು ಪಂಬೆತ್ತಾಡಿ ಜಯಂತ ಗೌಡ, ಮೀನಾಕ್ಷಿ ದಂಪತಿ ಪುತ್ರ.

ವಾಣಿಜ್ಯ ವಿಭಾಗದ ಶೋಬಿತ್ ಕುಮಾರ್ ಕೆ. 508 ಅಂಕ ಗಳಿಸಿದ್ದಾರೆ. ಇವರು ಬಾಳಿಲ ಆರಂಡ ಮನೆ ನಾರಾಯಣ ಕೆ., ಶಶಿಕಲಾ ದಂಪತಿ ಪುತ್ರ.

ವಾಣಿಜ್ಯ ವಿಭಾಗದ ವರ್ಷ ಬಿ. 493 ಅಂಕ ಗಳಿಸಿದ್ದಾರೆ. ಇವರು ಬಳ್ಪ ಸುಂದರ ಬಿ., ಲಲಿತಾ ಬಿ. ದಂಪತಿ ಪುತ್ರಿ.

100ಕ್ಕೆ 100 ಅಂಕ:
ಬೇರೆ ಬೇರೆ ವಿಷಯಗಳಲ್ಲಿ ಅನೇಕ ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದುಕೊಂಡಿದ್ದಾರೆ. ಅದರಲ್ಲಿ ಇಕನಾಮಿಕ್ಸ್ ನಲ್ಲಿ 4 ವಿದ್ಯಾರ್ಥಿಗಳು, ಬ್ಯುಸಿನೆಸ್ ಸ್ಟಡೀಸ್ ನಲ್ಲಿ 1, ಅಕೌಂಟೆನ್ಸಿಯಲ್ಲಿ 2, ಕಂಪ್ಯೂಟರ್ ಸೈನ್ಸ್ ನಲ್ಲಿ 2 ವಿದ್ಯಾರ್ಥಿಗಳು ಪ್ರತಿಶತ ಅಂಕಗಳನ್ನು ಪಡೆದುಕೊಂಡಿದ್ದಾರೆ. ಇಕನಾಮಿಕ್ಸ್ ನಲ್ಲಿ 6, ಬ್ಯುಸಿನೆಸ್ ಸ್ಟಡೀಸ್ ನಲ್ಲಿ 4, ಅಕೌಂಟೆನ್ಸಿಯಲ್ಲಿ 5, ಕಂಪ್ಯೂಟರ್ ಸೈನ್ಸಸ್ ನಲ್ಲಿ 4, ಕನ್ನಡದಲ್ಲಿ 5 ವಿದ್ಯಾರ್ಥಿಗಳು ಶೇ. 97ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. 8 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಹಾಗೂ 4 ವಿದ್ಯಾರ್ಥಿಗಳು ಶೇ. 80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಅದಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ದಾಖಲಾತಿ ಪ್ರಾರಂಭ:
ನಿಂತಿಕಲ್ಲು ಕೆ.ಎಸ್. ಗೌಡ ಪದವಿ ಪೂರ್ವ ಕಾಲೇಜಿನ ವಿಜ್ಞಾನಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರ ವಿಭಾಗ ಕಳೆದ ಹಲವಾರು ವರ್ಷಗಳಿಂದ ಉತ್ತಮ ಫಲಿತಾಂಶ ದಾಖಲಿಸುತ್ತಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ, ಪಠ್ಯೇತರ ಚಟುವಟಿಕೆಗೂ ಪ್ರೋತ್ಸಾಹ ನೀಡುತ್ತಿದೆ. ಇದೀಗ ಪಿಯುಸಿಗೆ ದಾಖಲಾತಿ ಆರಂಭಗೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.