ಪುತ್ತೂರು: ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಟಿಪ್ಪರ್ ಅಪ್ಪಳಿಸಿತ್ತು. ಅಷ್ಟೇ, ಬೈಕಿನಲ್ಲಿದ್ದ ಸಹೋದರರಿಬ್ಬರಿಗೂ ತೀವ್ರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಯಿತು. ನೆರವಿಗೆ ನಿಲ್ಲಬೇಕಿದ್ದ ತಂದೆ ವಿಕಲಚೇತನ. ಸಹಾಯಕ್ಕೆ ನಿಲ್ಲುವವರಾರು? ಕುಟುಂಬದ ಜವಾಬ್ದಾರಿಗೆ ಹೆಗಲು ಕೊಡುವವರಾರು? ಇಂತಹ ದೈನವೀ ಸ್ಥಿತಿಯಲ್ಲಿ ಸಹೋದರರಿಗೆ ನೆರವಾಗುವಂತೆ ತಾಯಿ ಮನವಿ ಮಾಡಿಕೊಂಡಿದ್ದಾರೆ.
ಇದು ಕುಟುಂಬವೊಂದರ ಹೃದಯ ವಿದ್ರಾವಕ ಸ್ಥಿತಿ. ಕಡಬ ತಾಲೂಕಿನ ಕುದ್ಮಾರು ಗ್ರಾಮದ ಪದ್ಮಯ್ಯ ಗೌಡ ಪುಷ್ಪಲತಾ ದಂಪತಿ ಪುತ್ರರಾದ ಮಿಥುನ್ ಹಾಗೂ ಚಿಂತನ್ ಅಪಘಾತಕ್ಕೀಡಾದವರು. ವಿಟ್ಲ – ಪುತ್ತೂರು ರಸ್ತೆಯಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಅಣ್ಣ ಮಿಥುನ್ ಅವರ ಕಾಲು, ಕುತ್ತಿಗೆ, ತಲೆಗೆ ತೀವ್ರ ಗಾಯವಾಗಿದ್ದರೆ, ತಮ್ಮ ಚಿಂತನ್ ಅವರ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಇಬ್ಬರೂ ಮಂಗಳೂರಿನ ಎಜೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ.
ಬಡ ಕುಟುಂಬ ಆರ್ಥಿಕ ಮೂಲ ಹೊಂದಿಸಿಕೊಳ್ಳಲು ಕಷ್ಟಪಡುತ್ತಿದೆ. ದೈನಂದಿನ ಖರ್ಚಿನ ಜೊತೆಗೆ ಆಸ್ಪತ್ರೆ ವೆಚ್ಚ ಸರಿದೂಗಿಸುವುದು ದೊಡ್ಡ ಸವಾಲಾಗಿದೆ. ಆದ್ದರಿಂದ ಸಹೃದಯಿಗಳು ಕಣ್ಣೀರೊರೆಸುವ ಕಾರ್ಯ ಮಾಡಬೇಕು. ಸುಮಾರು 7 ಲಕ್ಷ ರೂ.ಗಿಂತ ಅಧಿಕ ಚಿಕಿತ್ಸಾ ವೆಚ್ಚಕ್ಕೆ ನೆರವಾಗಬೇಕಾಗಿದೆ. ಕುಟುಂಬಕ್ಕೆ ಆಸರೆಯಾಗಿದ್ದ ಇವರಿಬ್ಬರು ಚೇತರಿಸಿಕೊಳ್ಳಲು ಹಲವು ತಿಂಗಳುಗಳು ಬೇಕಾಗಿದ್ದು, ತಮ್ಮಿಂದಾದ ಆರ್ಥಿಕ ಸಹಾಯ ನೀಡುವಂತೆ ಕುಟುಂಬ ವಿನಂತಿಸಿಕೊಂಡಿದೆ. ಅರ್ಥಿಕ ಸಹಾಯ ನೀಡುವವರು ಫೋನ್ ಪೇ ನಂಬರ್ : 9901044386, ಕೆನರಾ ಬ್ಯಾಂಕ್ ಸವಣೂರು ಶಾಖೆ ಖಾತೆ ನಂಬರ್ : 02122210010197, ಐಎಫ್‌ಎಸ್‌ಸಿ : CNRB0010212, ಹೆಸರು: ಮಿಥುನ್ ಕುಮಾರ್. ಮಾಹಿತಿಗಾಗಿ ಸಂಪರ್ಕಿಸಿ: 9449648966, 9902302867