ಪುತ್ತೂರು: ಬುಧವಾರ ಬೆಳಗ್ಗೆ ಶುರುವಾದ ಮತದಾನಕ್ಕೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತದಾನ ಕೇಂದ್ರದ ಮುಂದೆ ಮಾರುದ್ದದ ಸರತಿ ಸಾಲು ಕಂಡುಬಂದಿದೆ.

ವಾರದ ನಡುವಿನ ದಿನದಲ್ಲಿ ಚುನಾವಣೆ ಬಂದಿರುವ ಕಾರಣದಿಂದ ಎಲ್ಲರೂ ಬೆಳಗ್ಗೆಯೆ ಮತದಾನ ಮಾಡಲು ಬಂದಿದ್ದರು. ಪ್ರತಿ ಮತದಾನ ಕೇಂದ್ರದಲ್ಲು ಸರತಿ ಸಾಲು ಮಾರುದ್ದ ಬೆಳೆದಿತ್ತು. ಬುಧವಾರ ಹೆಚ್ಚಿನ ಕಚೇರಿ, ಅಂಗಡಿ- ಮಳಿಗೆಗಳಿಗೆ ರಜೆ ಘೋಷಿಸಲಾಗಿದ್ದರೂ, ಗ್ರಾಮೀಣ ಭಾಗಗಳಿಗೆ ಇದು ಅನ್ವಯ ಆಗುವುದಿಲ್ಲ. ಆದ್ದರಿಂದ ಬೆಳಿಗ್ಗೆಯೇ ಮತದಾನ ಮಾಡಿ ತೆರಳುವ ಧಾವಂತ ಎಲ್ಲರಲ್ಲೂ ಕಾಣುತ್ತಿತ್ತು.
ಮತದಾನ ಶಾಂತಿಯುತವಾಗಿ ನಡೆಯುತ್ತಿದ್ದು, ಇದುವರೆಗೆ ಎಲ್ಲಿಯೂ ಸಮಸ್ಯೆಯಾದ ನಿದರ್ಶನವಿಲ್ಲ. ಅಧಿಕಾರಿಗಳು ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಿಕೊಡುತ್ತಿದ್ದಾರೆ. ಮತದಾನ ಕೇಂದ್ರದೊಳಗೆ ಮೊಬೈಲ್ ಸೇರಿದಂತೆ ಡಿಜಿಟಲ್ ವಸ್ತುಗಳಿಗೆ ನಿಷೇಧ ಹಾಕಲಾಗಿತ್ತು.