ಒಬ್ಬರ ಮತ ಇನ್ನೊಬ್ಬರಿಂದ ಚಲಾವಣೆ: ಮಾತಿನ ಚಕಮಕಿ | ಮತದಾನ ಅವಕಾಶ ಕಳೆದುಕೊಂಡ ಮತದಾರ

ಕಡಬ: ತಾಲೂಕಿನ‌ 102 ನೆಕ್ಕಿಲಾಡಿ ಗ್ರಾಮದ ಕರ್ಮಾಯಿ ಶಾಲಾ 101ನೇ ಮತಗಟ್ಟೆಯಲ್ಲಿ ಸಾದಿಕ್ ಎಂಬವರು ಸಾದಿಕ್ ಕೆ ಎಂಬವರ ಮತವನ್ನು ಚಲಾಯಿಸಿದ್ದು, ಸ್ವಲ್ಪ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.

ಇಬ್ಬರ ತಂದೆಯ ಹೆಸರು ಅಬೂಬಕ್ಕರ್ ಆಗಿದ್ದುದೇ ಗೊಂದಲಕ್ಕೆ ಕಾರಣ. ಸ್ವಲ್ಪ ಹೊತ್ತು ಅಧಿಕಾರಿಗಳು ಗಲಬಿಲಿಗೊಂಡರು. ಮತಗಟ್ಟೆಯ ಅಧಿಕಾರಿಗಳ ಎಡವಟ್ಟಿನಿಂದ ಈ ಪ್ರಮಾದ ನಡೆದಿದ್ದು. ಸಾಧಿಕ್ ಕೆ ಎಂಬವರಿಗೆ ಮತದಾನದ ಅವಕಾಶ ಇಲ್ಲದಂತಾಯಿತು.

ಸ್ಥಳದಲ್ಲಿ ಮಾತಿನ ಚಕಮಕಿ, ವಾಗ್ಯುದ್ದ ನಡೆಯಿತು. ಎಷ್ಟೇ ಚರ್ಚೆ ನಡೆದರು ಸಾದಿಕ್ ಕೆ ಅವರಿಗೆ ಮತದಾನ ಮಾಡಲು ನಿರಾಕರಿಸಲಾಯಿತು. ಇದರಿಂದಾಗ ಗೊಂದಲ ‌ಸೃಷ್ಟಿಯಾಯಿತು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top