ಪುತ್ತೂರು: ಇಂದು ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾಗಿದ್ದು ಜೆಡಿಎಸ್ ಪಕ್ಷದ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ಇಂದು ಪುತ್ತೂರು ನಗರದಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಿವ್ಯಪ್ರಭಾ ಚಿಲ್ತಡ್ಕ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಭರವಸೆಗಳು ಪೊಳ್ಳು ಭರವಸೆ. ಪದವೀಧರ ವಿಧ್ಯಾರ್ಥಿಗಳಿಗೆ ಉದ್ಯೋಗದ ಭರವಸೆ ನೀಡದೆ ಪಾಕೆಟ್ ಮನಿ ನೀಡಿ ಸೋಮರಿಗಳನ್ನಾಗಿ ಮಾಡಲು ಹೊರಟಿದೆ. ಬುದ್ದಿ ಕಲಿಸುತ್ತೇನೆ ಎಂದು ಪಕ್ಷಾಂತರಗೊಂಡ ಅಭ್ಯರ್ಥಿಯಿಂದ ಯಾವ ಅಭಿವೃದ್ದಿಯನ್ನು ಪುತ್ತೂರಿನ ಜನತೆ ಬಯಸಬಹುದು. ಈ ಬಾರಿ ಪುತ್ತೂರಿನ ಜನತೆ ಬದಲಾವಣೆಯನ್ನು ಬಯಸುತ್ತಿದೆ ಕಾಂಗ್ರೆಸ್ಸ್ ಹಾಗೂ ಬಿಜೆಪಿಯ ಆಡಳಿತ ನೋಡಿ ಜನರು ಬೇಸತ್ತಿದ್ದಾರೆ.ರಾಜ್ಯದಲ್ಲಿ ಕುಮಾರ ಪರ್ವ ಆರಂಭವಾಗಿದೆ ಈ ಬಾರಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗುವುದು ಪಕ್ಕಾ ಎಂದ ಅವರು, ಈ ಬಾರಿ ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಬಂದಿರುವ ಜೆಡಿಎಸ್ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತವನ್ನ ನೀಡಿ ಗೆಲ್ಲಿಸಿಕೊಟ್ಟಲ್ಲಿ ಪುತ್ತೂರಿನ ಅಭಿವೃದ್ಧಿಯ ಚಿತ್ರಣವೇ ಬದಲಾಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಇಬ್ರಾಹಿಂ ಗೊಳಿಕಟ್ಟೆ, ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೇಗ , ಐ ಸಿ ಕೈಲಾಶ್ ಗೌಡ, ರಾಜ್ಯ ಜೆಡಿಎಸ್ ವಕ್ತಾರೆ ಜೊಹರ ನಿಸಾರ್ ಅಹ್ಮದ್, ದ.ಕ ಮಹಿಳಾ ಜೆಡಿಎಸ್ ಕಾರ್ಯದರ್ಶಿ ಪ್ರಿಯ ಸಾಲಿಯಾನ್ , ಹಮೀದ್ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು