ವಿದ್ಯಾರಶ್ಮಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ಫಲಿತಾಂಶ

ಪುತ್ತೂರು: ಮಾರ್ಚ್ ನಲ್ಲಿ ಜರಗಿದ 10ನೆ ತರಗತಿಯ ಪರೀಕ್ಷೆಗೆ ವಿದ್ಯಾರಶ್ಮಿ ವಿದ್ಯಾಲಯದ 32 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲರೂ ತೇರ್ಗಡೆಯಾಗುವ ಮೂಲಕ ಶೇಕಡಾ 100 ಫಲಿತಾಂಶ ದಾಖಲಾಗಿದೆ. ಈ ಬಾರಿಯ ಫಲಿತಾಂಶ ಸೇರಿದಂತೆ ಒಟ್ಟು 16 ಬಾರಿ ವಿದ್ಯಾರಶ್ಮಿ ವಿದ್ಯಾಲಯ ಶೇ. 100 ಫಲಿತಾಂಶ ದಾಖಲಿಸಿದೆ.

ಒಟ್ಟು ವಿದ್ಯಾರ್ಥಿಗಳ ಪೈಕಿ 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತೃಷಾ ಡಿ. ಸಾಲಿಯಾನ್ – 607 (ದಿನೇಶ್ ಕುಮಾರ್ ಡಿ. ಮತ್ತು ಮಮತಾ ಡಿ., ಬೆಳ್ಳಾರೆ ಇವರ ಪುತ್ರಿ), ಸನಾ ಫಾತಿಮಾ – 551 (ಎಂ.ಎ. ರಫೀಕ್ ಮತ್ತು ಎಸ್. ಮುನೀರಾ ಸವಣೂರು ಇವರ ಪುತ್ರಿ), ಸಮಹಿತ್ ಜೈನ್ – 545 (ಶತ್ರುಂಜಯ ಆರಿಗ ಮತ್ತು ಪ್ರಮೀಳಾ ಜೈನ್, ಬೆಳಂದೂರು ಇವರ ಪುತ್ರ), ಅತೀಕ್ಷ್ ಶೆಟ್ಟಿ – 542 (ಶ್ರೀನಿವಾಸ್ ಶೆಟ್ಟಿ ಮತ್ತು ಪ್ರತಿಭಾ ಶೆಟ್ಟಿ, ಮಾಡಾವು ಇವರ ಪುತ್ರ) ಮತ್ತು ನಿಷ್ಮತ್ ಫಾತಿಮಾ – 532 (ಕೆ. ಮಹಮ್ಮದ್ ಮತ್ತು ನೂರುನ್ನೀಸಾ, ಸವಣೂರು ಇವರ ಪುತ್ರಿ) ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಉಳಿದಂತೆ 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಕಾಲೇಜಿನ ಸಂಚಾಲಕ ಸವಣೂರು ಸೀತಾರಾಮ ರೈ ಮತ್ತು ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ಪ್ರಾಂಶುಪಾಲ ಸೀತಾರಾಮ ಕೇವಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top