ಪುತ್ತೂರು: ದ.ಕ.ಜಿಲ್ಲೆಯಲ್ಲಿ ಈ ಬಾರಿ ಜೆಡಿಎಸ್ ಪಕ್ಷದಿಂದ ಜನ ಸಾಮಾನ್ಯರಿಗೆ ಸ್ಪಂದಿಸುವ, ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜನತೆ ನಮ್ಮನ್ನು ಗೆಲ್ಲಿಸಿದಲ್ಲಿ ಈಗಾಗಲೇ ಪ್ರಣಾಳಿಕೆಯನ್ನು ತಿಳಿಸಿದಂತೆ ನೂರಕ್ಕೆ ನೂರು ಈಡೇರಿಸಲಿದ್ದೇವೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ ತಿಳಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ಪಕ್ಷ ನೇತಾರ ದೇವೇಗೌಡರು ಪ್ರಧಾನಿ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ದೇಶಕ್ಕೆ, ಕರ್ನಾಟಕ ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಆದರ್ಶ ಮುಖ್ಯಮಂತ್ರಿಯಾಗಿದ್ದರು, ರೈತಾಪಿ, ದುಡಿಯುವ ವರ್ಗಕ್ಕೆ ಆಶಾವಾದಿಯಾಗಿದ್ದರು. ಎಂದು ಹೇಳಿದರು.
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಗೆ ಹೇಳಿಕೊಳ್ಳುವಂತಹ ಶಕ್ತಿ ಇಲ್ಲದಿದ್ದರೂ ತನ್ನ ಆಡಳಿತಾವಧಿಯ ಅಭಿವೃದ್ಧಿ ಕಾರ್ಯವನ್ನು ಮನೆ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಎಂದ ಅವರು, ಈಗಾಗಲೇ ಬಿಡುಗಡೆ ಮಾಡಿ ಕಾಂಗ್ರೆಸ್ ನ ಪ್ರಣಾಳಿಕೆ ತಾತ್ಕಾಲಿಕವಾಗಿದೆ. ಅಲ್ಲದೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಟಿಕೇಟ್ ನೀಡಿದೆ ಎಂದು ಆರೋಪಿಸಿದರು.
ಕಳೆದ ಅಧಿಕಾರವಧಿಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಈಡೇರಿಸಲು ಆಗದ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಗಳನ್ನು, ಕೋಮುವಾದ ಇಟ್ಟುಕೊಂಡು ಜಮಸಾಮಾನ್ಯ ಮನಸ್ಸನ್ನು ಬದಲಾಯಿಸಲು ಹೊರಟಿದೆ ಹೊರಡು ಆಡಳಿತ ನಡೆಸಲು ವಿಫಲವಾಗಿದೆ ಎಂದು ನೇರ ಆರೋಪ ಮಾಡಿದರು.
ಈ ಬಾರಿ ಜನ ನಮ್ಮನ್ನು ಆಶೀರ್ವದಿಸಿದರೆ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಹೈಟೆಕ್ ಶಾಲೆಗಳ ನಿರ್ಮಾಣ, ಆಸ್ಪತ್ರೆಗಳಿಗೆ ಒತ್ತು, ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ವಿದ್ಯೆಗೆ ಹೆಚ್ಚಿನ ಒತ್ತು ನೀಡಿ ಉದ್ಯೋಗ ಸೃಷ್ಟಿ, ಗುಡಿ ಕೈಗಾರಿಕೆಗೆ ಪ್ರೋತ್ಸಾಹ, ಆಟೋ ರಿ್ಕ್ಷಾ ಚಾಲಕರ ನೆಮ್ಮದಿ ಜೀವನಕ್ಕೆ ತಿಂಗಳಿಗೆ ಎರಡು ಸಾವಿರ, ರೈತರಿಗೆ ಎಕ್ರೆಗೆ 10 ಸಾವಿರ ವರ್ಷಕ್ಕೆ ಧನಸಹಾಯಕ, ಅಂಗನವಾಡಿ ಶಿಕ್ಷಕರಿಗೆ ಮಾಶಾಸನ ಏರಿಕೆ, ಸ್ತ್ರೀಶಕ್ತಿ ಸಂಪೂರ್ಣ ಸಾಲಮನ್ನಾ. ಬಿಪಿಎಲ್ ನವರಿಗೆ 5 ಸಿಲಿಂಡರ್ ಉಚಿತ, ಬಡ ಹೆಣ್ಣು ಮಕ್ಕಳಿಗೆ ಉಚಿತ ಸ್ಕೂಟರ್ ಇವೆಲ್ಲವನ್ನು ನೂರಕ್ಕೆ ನೂರು ಶೇಕಡಾ ಈಡೇರಿಸಲಿದ್ದೇವೆ ಎಂದು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ, ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಮುಂಡೋಡಿ, ಐ.ಸಿ.ಕೈಲಾಸ್ ಉಪಸ್ಥಿತರಿದ್ದರು.