ಪುತ್ತೂರು: ನಟಿ ರಮ್ಯಾ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ರೋಡ್ ಶೋ ಬೊಳುವಾರಿನಿಂದ ದರ್ಬೆ ವೃತ್ತದವರೆಗೆ ಸೋಮವಾರ ಸಂಜೆ ನಡೆಯಿತು.

ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ರೋಡ್ ಶೋ ನಡೆದ ಸ್ವಲ್ಪ ಹೊತ್ತಿನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ರೋಡ್ ಶೋ ನಡೆಯಿತು. ಚಿತ್ರನಟಿ ರಮ್ಯಾ ಆಗಮಿಸುತ್ತಾರೆ ಎಂದು ಹೇಳಲಾಗಿತ್ತಾದರೂ, ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಕಲ್ಲಡ್ಕ ಗೊಂಬೆ ಬಳಗ, ಕೋಲು ನಡಿಗೆಯ ಜೊತೆ ಕಾಂಗ್ರೆಸ್ ಕಾರ್ಯಕರ್ತರು ಹೆಜ್ಜೆ ಹಾಕಿದರೆ, ಹಿಂಬದಿಯಲ್ಲಿ ಅಶೋಕ್ ಕುಮಾರ್ ರೈ, ಶಕುಂತಳಾ ಶೆಟ್ಟಿ, ಹೇಮನಾಥ ಶೆಟ್ಟಿ ಮೊದಲಾದವರು ತೆರೆದ ವಾಹನದಲ್ಲಿ ಸಾಗಿದರು.